‘ನೆರೆ ಹೋದರೂ ತೀರದ ಬವಣೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಆಗಸ್ಟ್ 21) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

ನೆರೆ ಹೊರೆಯಾಗದಿರಲಿ

ನೆರೆ ಹಾವಳಿಯಿಂದ ನೆರೆ-ಹೊರೆಯವರನ್ನು ಕಳೆದುಕೊಂಡು ಕಂಗಾಲಾದ ನಿರಾಶ್ರಿತರಿಗೆ ಸರ್ಕಾರ ಕಲ್ಪಿಸುವ ಮೂಲ ಸೌಕರ್ಯಗಳು ತಾತ್ಕಾಲಿಕ. ಅದಕ್ಕೆ ಶಾಶ್ವತವಾಗಿ ಪರಿಹಾರ ನೀಡಬೇಕು. ನಿರಾಶ್ರಿತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ಕಡೆ ನೆಲೆಯೂರಿ ನಿಂತಾಗ ಮಾತ್ರ ಜೀವನ ನಡೆಸಲು ಸಾಧ್ಯ. ನೆರೆ ಹಾವಳಿ ಎನ್ನುವುದು ಆಕಸ್ಮಿಕವೇ ಆದರೂ ಅದರ ಪರಿಣಾಮ ಭೀಕರ. ಇದರಿಂದ ನಷ್ಟದ ಪ್ರಮಾಣ ಅಧಿಕವಾಗಿದ್ದು ಸಾವು-ನೋವುಗಳು ಸಂಭವಿಸುವುದರಿಂದ ಸರ್ಕಾರವೂ ಶಾಶ್ವತ ಪರಿಹಾರ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

–ವೀರೇಶ್ ಹಲಗಪ್ಪನವರ, ಹೊಳಗುಂದಿ, ವಿಜಯನಗರ

ಕೊಳ್ಳುಬಾಕ ಜನಪ್ರತಿನಿಧಿಗಳು

ಮುಖ್ಯಮಂತ್ರಿ ಅವರ ತವರು ಜಿಲ್ಲೆ ಹಾವೇರಿ ಪ್ರತಿ ವರ್ಷ ನೆರೆ ಹಾವಳಿಗೆ ತುತ್ತಾಗುತ್ತದೆ. ಆದರೆ ಇದಕ್ಕೆ ಶಾಶ್ವತ ಪರಿಹಾರವೆಂಬುದಿಲ್ಲ. ಹಾವೇರಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕೊಳ್ಳುಬಾಕ ಸಂಪ್ರದಾಯದವರು. ಚುನಾವಣಾಸಮಯದಲ್ಲಿಹಣ ಮತ್ತುಜಾತಿನೋಡಿಆಯ್ಕೆಮಾಡುವುದರಿಂದ ಜನಪ್ರತಿನಿಧಿಗಳ ಉಡುಗೊರೆ ಅಂದರೆ ಇದೇ ಇರಬಹುದೇನೂ?

–ಮಾಲತೇಶ ಲಾಠಿ, ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.