ಬೆಂಗಳೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 155ಕ್ಕೂ ಹೆಚ್ಚು ಲಾರಿಗಳಲ್ಲಿ 31 ಸಾವಿರ ಚೀಲ ಈರುಳ್ಳಿ ಆವಕವಾಗಿದೆ. ಈರುಳ್ಳಿ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಸಗಟು ಮಾರುಕಟ್ಟೆಯಲ್ಲಿ ಧಾರಣೆ ಇಳಿದಿದ್ದರೂ ಸಣ್ಣ ವ್ಯಾಪಾರಿಗಳು ಮಾತ್ರ ದರ ಇಳಿಕೆ ಮಾಡಿಲ್ಲ.

ರಾಜ್ಯದ ವಿವಿಧ ಭಾಗಗಳಿಂದ 135ಕ್ಕೂ ಅಧಿಕ ಟ್ರಕ್ ಈರುಳ್ಳಿ ಆವಕ ವಾಗಿದ್ದು, ಅತ್ಯುತ್ತಮ ಗುಣ ಮಟ್ಟದ ಬೆಳೆ ಕ್ವಿಂಟಲ್‌ಗೆ ₹ 10 ಸಾವಿರಕ್ಕೆ ಹರಾಜಾಗಿದೆ.

ದಪ್ಪ ಈರುಳ್ಳಿ ₹ 8 ಸಾವಿರದಿಂದ 9 ಸಾವಿರ, ಮಧ್ಯಮ ಗಾತ್ರಕ್ಕೆ₹ 7 ಸಾವಿರದಿಂದ 8 ಸಾವಿರ, ಗೊಲ್ಟಾ ₹ 5 ಸಾವಿರದಿಂದ 6 ಸಾವಿರ, ಗೊಲ್ಟಿಗೆ ₹ 4 ಸಾವಿರದಿಂದ 5 ಸಾವಿರಕ್ಕೆ ಮಾರಾಟವಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಿಂದ ಬಂದಿರುವ ಮೂರು ಲಾರಿ ಹಳೇ ಈರುಳ್ಳಿ ಕ್ವಿಂಟಲ್‌ಗೆ ₹ 8,500ರಿಂದ 9,500 ವರೆಗೆ ವ್ಯಾಪಾರವಾಗಿದೆ. ಹೊಸ ಈರುಳ್ಳಿ 10 ಲಾರಿ ಆವಕವಾಗಿದ್ದು, ಅತ್ಯುತ್ತಮ ಗುಣಮಟ್ಟದ್ದು ಕ್ವಿಂಟಲ್‌ಗೆ ₹ 7 ಸಾವಿರದಿಂದ 9 ಸಾವಿರದವರೆಗೆ, ಸಾಧಾರಣ ಗುಣಮಟ್ಟದ್ದು ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರದಿಂದ 6 ಸಾವಿರದವರೆಗೆ ಹರಾಜಾಗಿದೆ.

ಟರ್ಕಿ ಈರುಳ್ಳಿ ನಾಲ್ಕು ಲಾರಿಗಳಲ್ಲಿ ಬಂದಿದ್ದು, ಉತ್ಕೃಷ್ಟ ಗುಣಮಟ್ಟಕ್ಕೆ ₹ 8 ಸಾವಿರದಿಂದ 8,500 ಮತ್ತು ಈಜಿಪ್ಟ್ ಈರುಳ್ಳಿ ಮೂರು ಟ್ರಕ್ ಬಂದಿದ್ದು ಕ್ವಿಂಟಲ್‌ಗೆ ₹ 7,800ರಿಂದ 8 ಸಾವಿರದವರೆಗೆ ಮಾರಾಟವಾಗಿದೆ. ಗ್ರಾಹಕರು ಈರುಳ್ಳಿ ಬೆಲೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಗಮನಿಸುವಂತೆ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.