ಬೆಂಗಳೂರು: ಹೆಸರಘಟ್ಟದ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಮೂಲಕ ರಕ್ಷಿಸಬೇಕು ಎಂದು ಪರಿಸರ ಪ್ರೇಮಿಗಳು ಆನ್‌ಲೈನ್ ವೇದಿಕೆಯಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

Jhatkaa.org ವೆಬ್‌ಸೈಟ್ ಮೂಲಕ SaveHesaraghatta ಎಂಬ ಅಭಿಯಾನ ನಡೆಯುತ್ತಿದೆ. ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಘೋಷಿಸಬೇಕೆಂಬ ಬೇಡಿಕೆ ಪರವಾಗಿ ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಇದೆ. ಈವರೆಗೆ 41,625 ಮಂದಿ ಸಹಿ ಮಾಡುವ ಮೂಲಕ ಆನ್‌ಲೈನ್ ಅಭಿಯಾನವನ್ನು ಬೆಂಬಲಿಸಿದ್ದಾರೆ.

ಹೆಸರಘಟ್ಟ ಸುತ್ತಮುತ್ತಲಿನ 5,010 ಎಕರೆ ಪ್ರದೇಶವನ್ನು ‘ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶ’ ಎಂದು ಘೋಷಿಸುವ ಪ್ರಸ್ತಾವ ರಾಜ್ಯ ವನ್ಯಜೀವಿ ಮಂಡಳಿಗೆ ಸಲ್ಲಿಕೆಯಾಗಿತ್ತು. ಈ ಪ್ರಸ್ತಾವವನ್ನು ಮಂಡಳಿಯು 2021ರ ಜನವರಿ 19ರಂದು ನಡೆದ ಸಭೆಯಲ್ಲಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಪರಿಸರಾಸಕ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಸ್ತಾವದ ಕುರಿತು ಪುನಃ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಮಂಡಳಿಗೆ ನಿರ್ದೇಶನ ನೀಡಿತ್ತು.

ಸೆಪ್ಟೆಂಬರ್ 5ರಂದು ನಡೆಯುವ ವನ್ಯಜೀವಿ ಮಂಡಳಿ ಸಭೆಯ ಕಾರ್ಯಸೂಚಿಯಲ್ಲಿ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಘೋಷಣೆಯ ಪ್ರಸ್ತಾವ ಇದೆ. ಪುನಃ ಪ್ರಸ್ತಾವವನ್ನು ತಿರಸ್ಕರಿಸಿ, ಯೋಜನೆಯೊಂದಕ್ಕೆ ಈ ಪ್ರದೇಶದ ಜಮೀನನ್ನು ಬಳಕೆ ಮಾಡಲು ಒಪ್ಪಿಗೆ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನದಿಂದ ಪರಿಸರಾಸಕ್ತರು ಅಭಿಯಾನ ಆರಂಭಿಸಿದ್ದಾರೆ.

‘1,912 ಎಕರೆಯಷ್ಟು ವಿಸ್ತಾರವಾದ ಹೆಸರಘಟ್ಟ ಕೆರೆಯಂಗಳವಿದೆ. ಕೆರೆಯಂಗಳದ ಸುತ್ತ ಇರುವ 356 ಪ್ರದೇಶ ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹುಲ್ಲುಗಾವಲು ಆವಾಸಸ್ಥಾನ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ಪ್ರದೇಶದಲ್ಲಿ 235 ಪ್ರಭೇದದ ಪಕ್ಷಿಗಳು, 400 ಪ್ರಭೇದದ ಕೀಟಗಳು, 100 ವಿಧದ ಚಿಟ್ಟೆಗಳು ಕಾಣಸಿಗುತ್ತವೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು’ ಎಂದು ಅಭಿಯಾನದ ಮನವಿಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.