ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿರುವ ಕಸಾಯಿಖಾನೆ ಹಾಗೂ ಕಲುಷಿತ ನೀರಿನ ಶುದ್ಧೀಕರಣ ಘಟಕದ ಕಾರ್ಯಾಚರಣೆಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸದ ಕಾರಣಕ್ಕೆ ಬಿಬಿಎಂಪಿಯಿಂದ ₹17.83 ಕೋಟಿ, ಹಲಸೂರು ಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಎಂಎಲ್‌ಡಿ ಕಲುಷಿತ ನೀರಿನ ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ) ಸೂಕ್ತ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಜಲಮಂಡಳಿಯಿಂದ ₹ 2.94 ಕೋಟಿ ಹಾಗೂ 100 ಕೆಎಲ್‌ಡಿ ಎಸ್‌ಟಿಪಿಯಲ್ಲೂ ನಿಗದಿತ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಎಂಇಜಿಯಿಂದ ₹ 2.94 ಕೋಟಿ ಪರಿಹಾರ ಪಡೆಯಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.