ಬೆಂಗಳೂರು: ‘ಪೆರೋಲ್ ಮೇಲೆ ಹೊರಬರುವ ಕೈದಿಗಳು ಅವಧಿ ಪೂರ್ಣಗೊಂಡ ಬಳಿಕ ಷರತ್ತುಗಳನ್ನು ಉಲ್ಲಂಘಿಸಿ ಜೈಲು ಅಧಿಕಾರಿಗಳಗೆ ಶರಣಾಗದೇ ಇದ್ದಲ್ಲಿ ಎದುರಿಸಬಹುದಾದ ಪರಿಣಾಮಗಳು ಮತ್ತು ಅದಕ್ಕೆ ಅನುಭವಿಸಬಹುದಾದ ಶಿಕ್ಷೆಗೆ ಸಂಬಂಧಿಸಿದಂತೆ ಕೈದಿಗಳಲ್ಲಿ ಜಾಗೃತಿ ಮೂಡಿಸಿ’ ಎಂದು ಹೈಕೋರ್ಟ್, ರಾಜ್ಯದ ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಪೆರೋಲ್ ಉಲ್ಲಂಘಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಈ ಕುರಿತಂತೆ ಆದೇಶಿಸಿದೆ.

‘ಪೆರೋಲ್ ಷರತ್ತುಗಳನ್ನು ಉಲ್ಲಂಘಿಸಿ ನಿಗದಿತ ಸಮಯದಲ್ಲಿ ಶರಣಾಗದ ಆರೋಪದಡಿ ಅಪರಾಧಿಯನ್ನು ಪುನಃ ವಿಚಾರಣೆಗೆ ಒಳಪಡಿಸಲು ಅವಕಾಶವಿದೆ. ಪೆರೋಲ್ ನಿಯಮಗಳ ಉಲ್ಲಂಘನೆ ಎಂಬುದು, ಅಶಿಸ್ತು ಮತ್ತು ಕಾನೂನುಬದ್ಧ ಬಂಧನವನ್ನು ಉಲ್ಲಂಘಿಸುವ ವಿಶಿಷ್ಟ ಅಪರಾಧವಾಗಿದೆ. ಆದ್ದರಿಂದ, ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆ ಮುಗಿದ ಬಳಿಕ ಪೆರೋಲ್ ಉಲ್ಲಂಘಿಸಿದ ಆರೋಪದ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಅಂತೆಯೇ, ಮೂಲ ಶಿಕ್ಷೆ ಮತ್ತು ಪೆರೋಲ್ ಉಲ್ಲಂಘನೆಯ ಶಿಕ್ಷೆ ಪ್ರತ್ಯೇಕವಾಗಿ ಇರಲಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಪೆರೋಲ್ ಮಂಜೂರಾದ ಬಳಿಕ ಷರತ್ತು ಉಲ್ಲಂಘಿಸಿದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಪೆರೋಲ್ ಮೇಲೆ ಬಿಡುಗಡೆಯಾದ ಕೈದಿಗಳ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತಾದ ಕಿರು ಹೊತ್ತಿಗೆ ಅಥವಾ ಕರಪತ್ರವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿ ಕೈದಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಹಂಚಬೇಕು’ ಎಂದು ನ್ಯಾಯಪೀಠ ಬಂದೀಖಾನೆ ಇಲಾಖೆಗೆ ತಾಕೀತು ಮಾಡಿದೆ.

ಮಾರ್ಗಸೂಚಿಗಳು

ಪೆರೋಲ್ ನೀಡುವ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಕೈದಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಷರುತ್ತುಗಳನ್ನು ವಿವರಿಸಬೇಕು.

ಪೆರೋಲ್ ಮೇಲೆ ಬಿಡುಗಡೆಯಾಗಿ ಪುನಃ ಶರಣಾಗದೇ ಇದ್ದಲ್ಲಿ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಿರಬೇಕು.

ಈ ಅಂಶಗಳು ಕೈದಿಗೆ ಅರ್ಥವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವರಿಂದ ಲಿಖಿತ ಹೇಳಿಕೆ ದಾಖಲಿಸಿಕೊಳ್ಳಬೇಕು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜೈಲಿನ ಆವರಣದಲ್ಲಿ ನಿಯಮಿತವಾಗಿ ನಡೆಸುವ ಕಾನೂನು ಸಾಕ್ಷರತಾ ಅಧಿವೇಶನಗಳಲ್ಲಿ ಪೆರೋಲ್ಗಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಪರಾಧಿಗೆ ಸಂಭಾವ್ಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಆದೇಶದ ಪ್ರತಿಯನ್ನು ರಿಜಿಸ್ಟ್ರಾರ್ ಜನರಲ್ ಅವರು ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕಳಹಿಸಿಕೊಡಬೇಕು.

ಏನಿದು ಪ್ರಕರಣ?

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಬಾಗಲಕೋಟೆ ಜಿಲ್ಲೆಯ 47 ವರ್ಷದ ಅಪರಾಧಿ ಮಹಿಳೆ 2022ರ ಮಾರ್ಚ್ 9ರಂದು ಪೆರೋಲ್ ಮೇಲೆ ಒಂದು ತಿಂಗಳ ಅವಧಿಗೆ ಬಿಡುಗಡೆಯಾಗಿದ್ದರು. ನಂತರ ಪೆರೋಲ್ ಅವಧಿಯನ್ನು ಪುನಃ 30 ದಿನಗಳವರೆಗೆ ವಿಸ್ತರಿಸಲಾಗಿತ್ತು. ಇದರನ್ವಯ ಮಹಿಳೆ 2022ರ ಜೂನ್ 8ರಂದು ವಿಯಪುರ ಜಿಲ್ಲಾ ಕಾರಾಗೃಹಕ್ಕೆ ಶರಣಾಗಬೇಕಾಗಿತ್ತು. ಆದರೆ ಶರಣಾಗದೆ ಪೆರೋಲ್ ಷರತ್ತುಗಳನ್ನು ಉಲ್ಲಂಘಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್ ನ್ಯಾಯಾಲಯ 2023ರ ಆಗಸ್ಟ್ನಲ್ಲಿ ಮಹಿಳೆಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿತ್ತು. ಈ ಆದೇಶವನ್ನು ವಿಜಯಪುರ ಜಿಲ್ಲಾ 4ನೇ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಪರಾಧಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.