ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರಸರ್ಕಾರಿ ನಿವಾಸದ ಭದ್ರತೆಗೆ ನಿಯೋಜಿತರಾಗಿದ್ದ, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಾನ್‌ಸ್ಟೆಬಲ್ ಮಂಜುನಾಥ ಹರಿಜನ (28) ಶನಿವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ನವನಗರದಲ್ಲಿರುವ ಎಸ್‌ಪಿ ನಿವಾಸದ ಗೇಟ್ ಎದುರಿನ ರಸ್ತೆ ಪಕ್ಕ ತಲೆಗೆ ಗುಂಡು ತಗುಲಿದ ಸ್ಥಿತಿಯಲ್ಲಿ ಮಂಜುನಾಥ ಶವ ಪತ್ತೆಯಾಗಿದೆ. ಶವದ ಪಕ್ಕ ಎರಡು ಜೀವಂತ ಗುಂಡು ಹಾಗೂ 303 ಸರ್ವಿಸ್ ರೈಫಲ್ ಬಿದ್ದಿರುವುದು ಕಂಡು ಬಂದಿದೆ. ಮಂಜುನಾಥ ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲ್ಲೂಕು ಮಿಟ್ಟಲಕೋಡದವರು. ವರ್ಷದ ಹಿಂದಷ್ಟೇ ಬಾಗಲಕೋಟೆಗೆ ವರ್ಗಾವಣೆಯಾಗಿ ಬಂದಿದ್ದು, ಅವರನ್ನು ಎಸ್‌ಪಿ ನಿವಾಸದ ಭದ್ರತೆಗೆ ನಿಯೋಜಿಸಲಾಗಿತ್ತು.

ಅಸ್ಪೃಶ್ಯತೆಯಿಂದನೊಂದಿದ್ದೇನೆ: ಮಂಜುನಾಥ ಹರಿಜನ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಕಿಸೆಯಲ್ಲಿ ದೊರೆತಿದೆ. ಸ್ವತಃ ಎಸ್‌ಪಿ ಅವರನ್ನು ಉದ್ದೇಶಿಸಿ ಬರೆದಿರುವ ಅವರು, ‘ಭಾರತದಲ್ಲಿರುವ ಅಸ್ಪೃಶ್ಯತೆಯಿಂದ ನೊಂದು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ನಾನು ಆತ್ಮಹತ್ಯೆಗೆ ಶರಣಾಗಲು ಕೋರಿ’ ಎಂದು ಬರೆದ ಪತ್ರದಲ್ಲಿ ‘ನನ್ನ ತಂದೆಯ ಆಸ್ತಿ ಹೊಡೆಯುವ ಉದ್ದೇಶದಿಂದ ಸಂಬಂಧಿಗಳು ನನ್ನ ಜೀವನ ಎಂಬ ದೋಣಿಯಲ್ಲಿ ಆಟವಾಡಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.