ಮಡಿಕೇರಿ: ‘ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ. ಅದರಲ್ಲಿ ನೀತಿಪಾಠ ಹಾಗೂ ನೈತಿಕ ವಿಚಾರಗಳಿದ್ದು, ಪಠ್ಯ ಪುಸ್ತಕಗಳಲ್ಲಿ ಸೇರಿಸುವುದು ಸೂಕ್ತವಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ಇಲ್ಲಿ ಪ್ರತಿಪಾದಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರಿ, ತಪ್ಪುಗಳ ಕುರಿತು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಕುರಾನ್, ಬೈಬಲ್ ಧಾರ್ಮಿಕ ಗ್ರಂಥಗಳು. ಭಗವದ್ಗೀತೆ ಧರ್ಮದ ಬಗ್ಗೆ ತಿಳಿಸುವುದಿಲ್ಲ. ಇದನ್ನು ಬೇರೆ ಗ್ರಂಥಗಳಂತೆ ನೋಡಲು ಹೋಗುವುದು ಬೇಡ’ ಎಂದರು.

‘ಹಿಂದೂ - ಮುಸ್ಲಿಂ ಒಗ್ಗಟ್ಟಿನಿಂದ ಸಾಗಲು ಸಾಧ್ಯವಿಲ್ಲವೆಂದು ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದರು. ಅಂಬೇಡ್ಕರ್ ಅವರಿಗೆ ಅಂದೇ ಅರ್ಥವಾಗಿದ್ದರೆ, ನಮಗೀಗ ತಿಳಿಯುತ್ತಿದೆ’ ಎಂದು ಹೇಳಿದರು.

‘ಅಯೋಧ್ಯೆ ವಿಚಾರದಲ್ಲಿ ಮುಸ್ಲಿಮರು ಪದೇಪದೇ ನ್ಯಾಯಾಲಯ ಎಂದು ಹೇಳುತ್ತಿದ್ದರು. ಕೋರ್ಟ್ ತೀರ್ಪು ಬಂದ ಬಳಿಕ ರಾಮಮಂದಿರ ನಿರ್ಮಿಸುತ್ತಿದ್ದೇವೆ. ಈಗ ಹಿಜಾಬ್ ಸಂಬಂಧ ನ್ಯಾಯಾಲಯದ ತೀರ್ಪು ಪ್ರಶ್ನಿಸುತ್ತಿದ್ದಾರೆ. ಅವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.