ಬೆಂಗಳೂರು: ನಮ್ಮ ಆಸ್ತಿ ವಿವರಗಳು ಜನರ ಮುಂದೆ ಇವೆ. ಬೇಕಾದರೆ ತನಿಖೆಗೆ ನಾವು ಸಿದ್ಧ. ಆದರೆ, ನಿಮ್ಮ ಆರ್ಎಸ್ಎಸ್ ಸಂಘಟನೆಯ ಆಸ್ತಿ ಮೂಲ ಏನು? ತನಿಖೆಗೆ ಸಿದ್ದವಿದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಯನ್ನು ಕೆಣಕಿ ಅವರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ 50 ವರ್ಷಗಳಲ್ಲಿ ನಾವು ಗಳಿಸಿದ ಆಸ್ತಿ, ಆದಾಯಗಳೆಲ್ಲದರ ವಿವರಗಳೂ ಜನತೆಯ ಮುಂದಿದೆ, ಮತ್ತು ನಮ್ಮ ಆದಾಯಕ್ಕೆ ತೆರಿಗೆ ಪಾವತಿಸಲಾಗುತ್ತದೆ. ಆದರೆ, ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ RSS ನೋಂದಾಯಿಸಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ NGO ಎನಿಸಿಕೊಂಡಿದೆ? ಎಂದು ಕಾಲೆಳೆದಿದ್ದಾರೆ.

ಇದು ಸಾಧ್ಯವಾಗಿದ್ದು ಹೇಗೆ? ನಮ್ಮ ಆದಾಯ ಮತ್ತು ನಿಮ್ಮ ಆರ್ಎಸ್ಎಸ್ ಆದಾಯಗಳ ಮೂಲಗಳ ಬಗ್ಗೆ ಐಟಿ, ಇ.ಡಿ ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ? ಎಂದು ಕೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಆರ್ಎಸ್ಎಸ್ ಮೇಲೆ ಮಾತಿನ ದಾಳಿ ಮುಂದುವರೆಸಿದ್ದಾರೆ.
.ದಲಿತ ಮುಖಂಡರ ಎತ್ತಿಕಟ್ಟುತ್ತಿರುವ ಪ್ರಿಯಾಂಕ್ ಖರ್ಗೆ: ಛಲವಾದಿ ನಾರಾಯಣಸ್ವಾಮಿ .ಪ್ರಿಯಾಂಕ್ ಖರ್ಗೆ ಜತೆಗೆ ನಿಲ್ಲುತ್ತೇವೆ: ದಲಿತ ಸಂಘರ್ಷ ಸಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.