ಬೆಂಗಳೂರು: ರಾಜ್ಯದ ಭೌಗೋಳಿಕ ಮತ್ತು ಪ್ರಾದೇಶಿಕ ಲಕ್ಷಣಗಳಿಗೆ ಅನುಗುಣವಾಗಿ ವಿವಿಧ ನವೋದ್ಯಮ ಕ್ಲಸ್ಟರ್ಗಳನ್ನು ಸ್ಥಾಪಿಸಲು ಮುಂದಿನ ಒಂದು ವರ್ಷದಲ್ಲಿ ₹1,000 ಕೋಟಿ ವಿನಿಯೋಗಿಸುತ್ತೇವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ‘ಏಟ್ರಿಯಾ ಬಿಯಾಂಡರ್ ಲ್ಯಾಬ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನವೋದ್ಯಮ ನೀತಿಯ ಅಡಿಯಲ್ಲಿ 25 ಸಾವಿರ ನವೋದ್ಯಮಗಳನ್ನು ಬೆಳೆಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಹೆಚ್ಚು ಚಾಲ್ತಿಯಲ್ಲಿರುವ ಡೀಪ್ ಟೆಕ್ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ’ ಎಂದರು.

‘ನಮ್ಮ ಸರ್ಕಾರವು ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ನವೋದ್ಯಮಗಳನ್ನು ನಿಕಟವಾಗಿ ಜೋಡಿಸುವುದರ ಮೂಲಕ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಭದ್ರ ಬುನಾದಿ ಹಾಕುತ್ತಿದೆ. ಏಟ್ರಿಯಾ ಬಿಯಾಂಡರ್ ಲ್ಯಾಬ್ಸ್ (ಎಬಿಎಲ್) ಅಂತಹ ವೇದಿಕೆಗಳಲ್ಲಿ ಒಂದು. ಸಂಶೋಧನೆಗಳು ಪ್ರಯೋಗಾಲಯದ ನಾಲ್ಕು ಗೋಡೆಗಳಿಂದಾಚೆಗೆ ಬಂದು ವಾಸ್ತವಿಕ ಜಗತ್ತಿಗೆ ಪ್ರಯೋಜನಕಾರಿಯಾಗಿ ಪರಿವರ್ತಿಸಲು ಎಬಿಎಲ್ ವೇದಿಕೆ ಒದಗಿಸಲಿದೆ’ ಎಂದರು. ಏಟ್ರಿಯಾ ವಿಶ್ವವಿದ್ಯಾಲಯದ ಕುಲಪತಿ ಸುಂದರ್ ರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.