ಬೆಂಗಳೂರು: ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಅಪಾರ್ಟ್ಮೆಂಟ್, ವಿಲ್ಲಾ, ವಾಣಿಜ್ಯ ಸಂಕೀರ್ಣ, ಮಾಲ್, ವಸತಿಯೇತರ ಕಟ್ಟಡ ಮತ್ತು ಬಹುಮಾಲೀಕತ್ವದ ಕಟ್ಟಡಗಳ ಆಸ್ತಿ ತೆರಿಗೆ ಏರಿಕೆಯಾಗಲಿದೆ.

ಈ ಉದ್ದೇಶದಿಂದ ರಾಜ್ಯ ಸರ್ಕಾರವು, ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ, ಫೀಜುಗಳ) ನಿಯಮಗಳು–2025’ ಕರಡು ಅಧಿಸೂಚನೆ ಯನ್ನು ಹೊರಡಿಸಿದೆ. ಆಕ್ಷೇಪ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ. ನೂತನ ನಿಯಮ ಜಾರಿಯಾದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಕಟ್ಟಡಗಳನ್ನು ಹೊಂದಿರುವವರು ಆಸ್ತಿ ತೆರಿಗೆಗೆ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.

ಈಗ ಕಟ್ಟಡಗಳ ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ವರ್ಗೀಕರಣ ಮಾಡಿ, ಆಸ್ತಿ ತೆರಿಗೆ ವಿಧಿಸಲಾಗು
ತ್ತದೆ. ಕರಡು ನಿಯಮಗಳಲ್ಲಿ, ಈ ವರ್ಗೀಕರಣದ ಮಾನದಂಡಗಳಿಗೆ ಗಣನೀಯ ಬದಲಾವಣೆ ತರಲಾಗಿದೆ.

ಈಗ ಜಾರಿಯಲ್ಲಿರುವ ನಿಯಮಗಳಲ್ಲಿ, ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಪ್ರದೇಶ–1, ಪ್ರದೇಶ–2, ಪ್ರದೇಶ–3 ಮತ್ತು ಪ್ರದೇಶ–4 ಎಂದು ನಾಲ್ಕು ವರ್ಗೀಕರಣ ಮಾಡಲಾಗುತ್ತಿದೆ. ಪ್ರದೇಶ–1ರಲ್ಲಿನ ಆಸ್ತಿಗಳಿಗೆ ಗರಿಷ್ಠ ಪ್ರಮಾಣದ ತೆರಿಗೆ ಅನ್ವಯವಾಗುತ್ತಿದ್ದರೆ, ಪ್ರದೇಶ–4ರಲ್ಲಿನ ಆಸ್ತಿಗಳಿಗೆ ಕನಿಷ್ಠ ಪ್ರಮಾಣದ ತೆರಿಗೆ ಅನ್ವಯವಾಗುತ್ತಿದೆ. ಕರಡು ನಿಯಮಗಳಲ್ಲಿ ಈ ವರ್ಗೀಕರಣವನ್ನು ಆರಕ್ಕೆ ಹೆಚ್ಚಿಸಲಾಗಿದೆ.

ಕರಡು ನಿಯಮಗಳಲ್ಲಿ ವರ್ಗೀಕರಣದ ಮಾನದಂಡಗಳನ್ನು ಬದಲಿಸಲಾಗಿದೆ. ಈಗ ಕಡಿಮೆ ತೆರಿಗೆ ಅನ್ವಯವಾಗುತ್ತಿರುವ ಸ್ವತ್ತುಗಳಿಗೆ, ಇನ್ನು ಮುಂದೆ ಹೆಚ್ಚು ತೆರಿಗೆ ಕಟ್ಟಬೇಕಾಗಲಿದೆ.

ಈಗ ಪ್ರದೇಶ–2ರಲ್ಲಿ (ಪ್ರತಿ ಚದರಮೀಟರ್ಗೆ ₹40,001ರಿಂದ ₹60,000ರದವರಗೆ ಸ್ಥಿರಾಸ್ತಿ ಮಾರ್ಗಸೂಚಿ ದರ) ಇರುವ ವಸತಿ ಕಟ್ಟಡಗಳಿಗೆ, ಅವುಗಳ ಮೌಲ್ಯದ ಶೇ 0.09ರಷ್ಟು ಆಸ್ತಿ ತೆರಿಗೆ
ವಿಧಿಸಲಾಗುತ್ತಿದೆ. ಕರಡು ನಿಯಮ ಜಾರಿಯಾದ ನಂತರ ಮಾರ್ಗಸೂಚಿಮಾರುಕಟ್ಟೆ ಮೌಲ್ಯ ₹50,001 ಮತ್ತು ಅದಕ್ಕಿಂತ ಹೆಚ್ಚು ಇರುವ ವಸತಿ ಕಟ್ಟಡಗಳಿಗೆ, ಅವುಗಳ ಮೌಲ್ಯದ ಶೇ 0.10ರಷ್ಟು ಆಸ್ತಿ ತೆರಿಗೆ ಅನ್ವಯವಾಗಲಿದೆ. ಇದೇ ವರ್ಗದ ಸರ್ವಿಸ್ ಅಪಾರ್ಟ್ಮೆಂಟ್, ವಿಲ್ಲಾಮೆಂಟ್ಗಳ ತೆರಿಗೆಯು ಅವುಗಳ ಆಸ್ತಿ ಮೌಲ್ಯದಶೇ 0.30ರಿಂದ ಶೇ 40ಕ್ಕೆ ಏರಿಕೆಯಾಗಲಿದೆ. ವಾಣಿಜ್ಯ ಸಂಕೀರ್ಣ, ಮಾಲ್ನಂತಹ ಕಟ್ಟಡಗಳ ತೆರಿಗೆಯು ಅವುಗಳ ಮೌಲ್ಯದ ಶೇ 0.40ರಿಂದ ಶೇ 0.50ಕ್ಕೆ ಏರಿಕೆಯಾಗಲಿದೆ.

ತೆರಿಗೆ ಮೂಲದ ಆದಾಯ ಸಂಗ್ರಹ ಹೆಚ್ಚಳಕ್ಕೆ ರಾಜ್ಯ ಸರ್ಕಾರವು ತಜ್ಞರ ಸಲಹೆ ಪಡೆದಿತ್ತು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಅವಕಾಶ ಇರುವುದನ್ನು ತಜ್ಞರ ಸಮಿತಿ ಗುರುತಿಸಿತ್ತು. ಜತೆಗೆ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ, ಹಲವು ಸಾವಿರ ಕೋಟಿಯಷ್ಟು ಆದಾಯ ವೃದ್ಧಿಸಬಹುದು ಎಂದು ತಿಳಿಸಿತ್ತು.

ಏನೆಲ್ಲಾ ಬದಲಾವಣೆ...

ತೆರಿಗೆ ವ್ಯಾಪ್ತಿ ವರ್ಗೀಕರಣದಲ್ಲಿ ವ್ಯಾಪಕ ಬದಲಾವಣೆ

ಪ್ರತಿ ಚದರ ಮೀಟರ್ಗೆ ₹50,000ಕ್ಕಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ಎಲ್ಲ ಕಟ್ಟಡಗಳ ತೆರಿಗೆ ಏರಿಕೆ

ಪ್ರತಿ ಚದರ ಮೀಟರ್ಗೆ ₹40,000ಕ್ಕಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ವಸತಿ ಕಟ್ಟಡಗಳ ತೆರಿಗೆ
ತುಸು ಇಳಿಕೆ

ಪ್ರತಿ ಚದರ ಮೀಟರ್ಗೆ ₹40,000ಕ್ಕಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ವಸತಿಯೇತರ ಮತ್ತು ವಾಣಿಜ್ಯ ಕಟ್ಟಡಗಳ ತೆರಿಗೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.