ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇಮೇಲ್, ಪತ್ರದ ಮೂಲಕ ಅಹವಾಲುಗಳನ್ನು ಕಳುಹಿಸಬೇಕು. ಪ್ರಾಧಿಕಾರದ ಸಿಬ್ಬಂದಿ, ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವಂತಿಲ್ಲ. ಕಚೇರಿ ವೇಳೆಯಲ್ಲಿ ಅನಗತ್ಯ ಕರೆ ಮಾಡಿ, ಒತ್ತಡ ಹೇರಿ ಮಾಹಿತಿ ಪಡೆಯುವ ಅಭ್ಯರ್ಥಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸೂಚಿಸಿದೆ.