ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ಪಡೆದ 14 ಬದಲಿ ನಿವೇಶನಗಳ ಕುರಿತು ಲೋಕಾಯುಕ್ತ ಹಾಗೂ ಇ.ಡಿ. ತನಿಖೆ ಚುರುಕಾದ ಬೆನ್ನಲ್ಲೇ, ಅವರ ವಿರುದ್ಧ ನಿವೇಶನದ ಜೊತೆಗೆ ರಸ್ತೆ ಜಾಗವನ್ನು ಸೇರಿಸಿ ಕ್ರಯಪತ್ರ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ.

‘ಬಿ.ಎಂ. ಪಾರ್ವತಿ ಅವರು ಕಳೆದ ವರ್ಷ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಖರೀದಿಸಿದ್ದು, ಅದರೊಂದಿಗೆ ರಸ್ತೆಗೆ ಮೀಸಲಿಟ್ಟಿದ್ದ ಜಾಗವನ್ನೂ ಸೇರಿಸಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಈ ಸಂಗತಿ ಬಯಲಾಗುತ್ತಲೇ, ವಿವಾದಿತ ಜಾಗವನ್ನು ಮುಡಾಕ್ಕೆ ವಾಪಸ್ ನೀಡಿ ತಿದ್ದುಪಡಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ’ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ದೂರಿದ್ದಾರೆ. ಈ ಕುರಿತ ದಾಖಲೆಗಳನ್ನು ಶನಿವಾರ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಹೆಬ್ಬಾಳದ ಸರ್ವೆ ಸಂಖ್ಯೆ 445ರಲ್ಲಿ ಒಟ್ಟು 4 ಎಕರೆ 11 ಗುಂಟೆ ಜಾಗವಿದ್ದು, ಅದರಲ್ಲಿ 20 ಗುಂಟೆಯನ್ನು ಮಾಲೀಕರು 2014ರಲ್ಲಿ ಕೈಗಾರಿಕಾ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಮುಡಾದಲ್ಲಿ ಭೂ ಉಪಯೋಗ ಬದಲಾವಣೆ ಮಾಡಿಸಿಕೊಂಡಿದ್ದರು. 2018ರಲ್ಲಿ ಅದೇ ಜಮೀನಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂ ಪರಿವರ್ತನೆ ಮಾಡಿಕೊಡಲಾಗಿದ್ದು, 20 ಗುಂಟೆ ಪೈಕಿ 1.5 ಗುಂಟೆಯನ್ನು ನೀರಿನ ಪೈಪ್ಲೈನ್ ಕಾಮಗಾರಿಗಾಗಿ ಬಿಟ್ಟು ಉಳಿದ 18.5 ಗುಂಟೆಗೆ ಮಾತ್ರ ವಸತಿ ಉಪಯೋಗಕ್ಕೆ ಪರಿವರ್ತಿಸಲಾಗಿತ್ತು.

ಅದೇ ಜಾಗಕ್ಕೆ 2019ರಲ್ಲಿ ಮುಡಾದಿಂದ ಏಕ ನಿವೇಶನ ನಕ್ಷೆ ಅನುಮೋದನೆಯಾಗಿದ್ದು, ಒಟ್ಟು 21,771 ಚದರ ಅಡಿ ಜಾಗದಲ್ಲಿ ರಸ್ತೆ ವಿಸ್ತರಣೆಗೆ ಸುಮಾರು 8,980 ಚದರ ಅಡಿ ಜಾಗ ಬಿಟ್ಟು ಉಳಿದ 12,782 ಚದರ ಅಡಿಗೆ ಮಾತ್ರ ನಕ್ಷೆ ಅನುಮೋದನೆ ಮಾಡಿಕೊಡಲಾಗಿತ್ತು. ಮಾಲೀಕ ಎ.ಎಸ್. ಗಣೇಶ್ ಅವರು 2019ರ ಅಕ್ಟೋಬರ್ 31ರಂದು ನೋಂದಾಯಿತ ಪರಿತ್ಯಾಜನ ಪತ್ರದ ಮೂಲಕ 8,980 ಚದರ ಅಡಿ ಜಾಗವನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದರು.

ಪಾರ್ವತಿ ಅವರು ಅದೇ ಜಾಗವನ್ನು 2023ರ ಸೆಪ್ಟೆಂಬರ್ 29 ರಂದು ₹1.85 ಕೋಟಿಗೆ ಖರೀದಿಸಿದ್ದರು. ಮೂಲ ಮಾಲೀಕರು ರಸ್ತೆ, ಪೈಪ್ಲೈನ್ಗೆಂದು ಬಿಟ್ಟುಕೊಟ್ಟಿದ್ದ ಜಾಗವನ್ನೂ ಸೇರಿಸಿ 20 ಗುಂಟೆಯನ್ನು (21,771 ಚ.ಅಡಿ) ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಸಿಕೊಂಡಿದ್ದರು. ಇದು ಕಾನೂನಿನ ಉಲ್ಲಂಘನೆ ಎಂಬುದು ಅವರ ಮೇಲಿರುವ ಆರೋಪ.

ದೂರುದಾರರು ಹೇಳುವುದೇನು?:

‘ಅಕ್ರಮದ ಮಾಹಿತಿ ಸಿಗುತ್ತಲೇ ನಾನು ಮಾಹಿತಿ ಹಕ್ಕಿನ ಅಡಿ ದಾಖಲೆಗಳನ್ನು ಕೋರಿ ಮುಡಾಕ್ಕೆ ಕಳೆದ ಆಗಸ್ಟ್ 20ರಂದು ಅರ್ಜಿ ಸಲ್ಲಿಸಿದ್ದೆ. 22ರಂದು ಮುಡಾ ದಾಖಲೆಗಳನ್ನು ನೀಡಿತು. ಅದನ್ನು ತಿಳಿದು ಪಾರ್ವತಿಯವರು ಆಗಸ್ಟ್ 30ರಂದು ಮುಡಾ ಆವರಣದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ಆಸ್ತಿಯ ಕ್ರಯಪತ್ರದ ತಿದ್ದುಪಡಿ ಮಾಡಿಕೊಂಡು 21,771 ಚದರ ಅಡಿ ಜಾಗದ ಪೈಕಿ 13,292 ಚದರ ಅಡಿ ಜಾಗವನ್ನು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಮರುದಿನವೇ ಮತ್ತೊಂದು ತಿದ್ದುಪಡಿ ಕ್ರಯಪತ್ರ ಮಾಡಿಕೊಂಡಿದ್ದು, ಅದರಲ್ಲಿ ನಿವೇಶನದ ವಿಸ್ತೀರ್ಣವನ್ನು 12,782 ಚದರ ಅಡಿಗೆ ಇಳಿಸಲಾಗಿದೆ’ ಎಂದು ಗಂಗರಾಜು ದೂರಿದ್ದಾರೆ.

‘ಮುಡಾಕ್ಕೆ ಪರಿತ್ಯಾಜ್ಯನ ಪತ್ರದ ಮೂಲಕ ಬಿಟ್ಟುಕೊಟ್ಟಿದ್ದ ಜಾಗವನ್ನೂ ಸೇರಿಸಿ ಮಾಲೀಕರು ನೋಂದಣಿ ಮಾಡಿಕೊಟ್ಟಿದ್ದು, ಏನನ್ನೂ ಪರಿಶೀಲಿಸದೇ ಪಾರ್ವತಿ ಅವರು ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿರುವುದು ನಿಯಮಬಾಹಿರ. ಅಧಿಕಾರಿಗಳೂ ಅದರಲ್ಲಿ ಶಾಮೀಲಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಪಾರ್ವತಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.