ನವದೆಹಲಿ: ‘ಈ ಹಿಂದೆ ಇತಿಹಾಸ ತಿಳಿದುಕೊಳ್ಳದೇ ಇದ್ದಿದ್ದು ನನ್ನ ತಪ್ಪು. ನನಗೆ ಮೊದಲೇ ಒಬಿಸಿ ಸಮುದಾಯದ ಸಮಸ್ಯೆಗಳ ಅರಿವಿದ್ದಿದ್ದರೆ, ಬಹಳ ಹಿಂದೆಯೇ ಜಾತಿ ಜನಗಣತಿಯನ್ನು ನಡೆಸುತ್ತಿದ್ದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಪಕ್ಷದ ಒಬಿಸಿ ಘಟಕ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಒಬಿಸಿಯ ‘ಭಾಗೀದಾರಿ ನ್ಯಾಯ ಸಮ್ಮೇಳನ’ದಲ್ಲಿ ಪಾಲ್ಗೊಂಡಿದ್ದ ಅವರು, ಒಬಿಸಿಯವರ ಸಮಸ್ಯೆಗಳು ಗೌಪ್ಯವಾಗಿರುತ್ತವೆ ಮತ್ತು ಸುಲಭವಾಗಿ ಕಾಣಿಸುವುದಿಲ್ಲ ಎಂದರು.

‘ದಲಿತರು, ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತರ ವಿಷಯಕ್ಕೆ ಬಂದಾಗ, ನನಗೆ ಉತ್ತಮ ಅಂಕಗಳು ದೊರೆಯಬೇಕು. ಮಹಿಳೆಯರ ವಿಷಯದಲ್ಲಿ ನನಗೆ ಉತ್ತಮ ಅಂಕಗಳು ದೊರೆಯಬೇಕು. ಆದರೆ, ನಾನು ಹಿಂದಿರುಗಿ ನೋಡಿದಾಗ, ಒಂದು ವಿಷಯದ ಕೊರತೆ ಕಾಣುತ್ತದೆ. ನಾನು ಒಂದು ತಪ್ಪು ಮಾಡಿದ್ದೇನೆ. ನಾನು ಒಬಿಸಿ ಸಮುದಾಯವನ್ನು ರಕ್ಷಿಸಬೇಕಿದ್ದ ರೀತಿಯಲ್ಲಿ ರಕ್ಷಿಸಲಿಲ್ಲ’ ಎಂದರು.

‘2004ರಿಂದ ನಾನು ರಾಜಕೀಯದಲ್ಲಿದ್ದೇನೆ. ಹಿಂದಿರುಗಿ ನೋಡಿದಾಗ, ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಆ ಸಮಯದಲ್ಲಿ ನನಗೆ ನಿಮ್ಮ ಸಮಸ್ಯೆಗಳು ಆಳವಾಗಿ ಅರ್ಥವಾಗಲಿಲ್ಲ. ನಿಮ್ಮ (ಒಬಿಸಿ) ಇತಿಹಾಸ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದ್ದರೆ, ನಾನು ಆಗಲೇ ಜಾತಿ ಜನಗಣತಿ ಮಾಡಿಸುತ್ತಿದ್ದೆ. ನನಗೆ ಈ ಕುರಿತು ವಿಷಾದವಿದೆ. ಇದು ನನ್ನಿಂದಾದ ತಪ್ಪು. ಇದು ಕಾಂಗ್ರೆಸ್ ಪಕ್ಷದ ತಪ್ಪಲ್ಲ, ನನ್ನ ತಪ್ಪು. ಈ ತಪ್ಪನ್ನು ನಾನು ಸರಿಪಡಿಸಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು.

‘ಜೊತೆಗೆ, ತಪ್ಪಾಗಿರುವುದು ಒಳ್ಳೆಯದೇ ಆಯಿತು. ಆ ಸಮಯದಲ್ಲಿ ಜಾತಿ ಜನಗಣತಿ ನಡೆದಿದ್ದರೆ, ಈಗ ನಡೆದಂತೆ ನಡೆಯುತ್ತಿರಲಿಲ್ಲ. ನಾವು ತೆಲಂಗಾಣದಲ್ಲಿ ಮಾಡಿರುವುದು ರಾಜಕೀಯ ಭೂಕಂಪವನ್ನೇ ಸೃಷ್ಟಿಸಿದೆ’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ರಾಹುಲ್, ‘ಅವರದ್ದು ತೋರಿಕೆ, ಒಳಗೆಲ್ಲಾ ಟೊಳ್ಳು’ ಎಂದರು. ಕೇವಲ ಮಾಧ್ಯಮಗಳು ಪ್ರಧಾನ ಮಂತ್ರಿಯವರ ಬಲೂನ್ ಅನ್ನು ಊದಿದ್ದಾರೆ. ಆದರೆ, ಅವರ ಒಳಗೆ ಅಂತಹ ಯಾವುದೇ ಅಂಶಗಳಿಲ್ಲ’ ಎಂದು ಛೇಡಿಸಿದರು.

‘ನಾನು ನಿಮಗೆ ಹೇಳುತ್ತಿದ್ದೇನೆ. ನೀವು ಅವರಿಗೆ ತುಂಬಾ ಪ್ರಾಮುಖ್ಯ ನೀಡುತ್ತಿದ್ದೀರಿ. ಮೊದಲು, ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಈಗ ನಾನು ಅವರನ್ನು 2 –3 ಬಾರಿ ಭೇಟಿಯಾಗಿದ್ದೇನೆ. ಈಗ ನನಗೆ ಅರ್ಥವಾಗಿದೆ. ಅಲ್ಲಿ ಏನು ಇಲ್ಲ. ತೋರಿಕೆಯಷ್ಟೇ, ಒಳಗೆಲ್ಲಾ ಟೊಳ್ಳು’ ಎಂದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮೋದಿ ಅವರು ‘ಸುಳ್ಳು ಹೇಳುವವರು. ಅವರಿಂದ ದೇಶಕ್ಕೆ ಏನೂ ಒಳಿತು ಮಾಡಲು ಸಾಧ್ಯವಿಲ್ಲ’ ಎಂದು ಟೀಕಿಸಿದರು.

‘ಒಬಿಸಿ ಮತ್ತು ಇತರ ನಿರ್ಲಕ್ಷಿತ ವರ್ಗಗಳು ಬಿಜೆಪಿಯ ವಿರುದ್ಧ ಒಂದಾಗಬೇಕು’ ಎಂದು ಕರೆ ನೀಡಿರುವ ಖರ್ಗೆ, ‘ಒಬ್ಬ ಮನುಷ್ಯನಲ್ಲಿ ಮೂರು ಅಂಶಗಳಿರಬೇಕು. ಮಾನಸಿಕ ಬಲ, ಮನುಷ್ಯ ಬಲ ಮತ್ತು ಆರ್ಥಿಕ ಬಲ. ಇದರಿಂದ ಆತ ಸಮಾಜದಲ್ಲಿ ಮುಂದೆ ಬರಬಹುದು. ಇದರಲ್ಲಿ ಒಂದು ಇಲ್ಲದಿದ್ದರೂ ದೇಶದಲ್ಲಿ ನೀವು ಮುಂದಕ್ಕೆ ಬರಲಾಗದು’ ಎಂದರು.

‘18ನೇ ಲೋಕಸಭೆಯಲ್ಲಿ ನಾವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಜನರ ಮುಂದೆ ಹೋಗಿದ್ದೆವು ಮತ್ತು ‘ಸ್ವಲ್ಪ ಯಶಸ್ಸು’ ಗಳಿಸಿದೆವು. ನಾವು ಇನ್ನೂ 20–25 ಹೆಚ್ಚಿನ ಸೀಟುಗಳನ್ನು ಗಳಿಸಿದ್ದರೆ, ಮೋದಿ ಅವರ ಸರ್ಕಾರ ಬುಡಮೇಲಾಗುತ್ತಿತ್ತು’ ಎಂದರು.

Cut-off box - ಒಂದು ಭಾರತದ ಕನಸು: ಸಿಎಂ ‘ನಾವು ಒಂದು ಭಾರತದ ಕನಸು ಕಾಣುತ್ತೇವೆ. ಅಲ್ಲಿ ನೇಕಾರನ ಮಗಳು ನೀತಿನಿರೂಪಕಳಾಗುತ್ತಾಳೆ ಕುರಿಗಾಹಿಯ ಮಗ ಒಬ್ಬ ವಿದ್ವಾಂಸನಾಗುತ್ತಾನೆ ಮತ್ತು ಕಾರ್ಮಿಕನ ಮಗು ಬದುಕಿನ ಆಚೆಗೆ ಕನಸು ಕಾಣುತ್ತದೆ. ಆ ಭಾರತವನ್ನು ಘೋಷಣೆಗಳಿಂದ ನಿರ್ಮಿಸಲಾಗದು. ಇದಕ್ಕೆ ರಾಜಕೀಯ ಧೈರ್ಯ ಮತ್ತು ನೈತಿಕ ಸ್ಪಷ್ಟತೆಯ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮ್ಮೇಳನದಲ್ಲಿ ಮಾತನಾಡಿದ ಅವರು ‘ಪ್ರತಿಯೊಬ್ಬ ಒಬಿಸಿ ನಾಯಕ ಪ್ರತಿಯೊಬ್ಬ ಗ್ರಾಮೀಣ ಕಾರ್ಯಕರ್ತ ಸಂವಿಧಾನದಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಆಂದೋಲನ ಸಂಘಟನೆಯ ಅಗತ್ಯ ಇದೆ. ಕಾಯುವ ಸಮಯ ಮುಗಿದಿದೆ. ನಾವು ನ್ಯಾಯವನ್ನು ವಿಳಂಬಗೊಳಿಸದ ಪ್ರಾತಿನಿಧ್ಯವನ್ನು ನಿರಾಕರಿಸದ ಮತ್ತು ಘನತೆಯು ಷರತ್ತುಬದ್ಧವಾಗಿರದ ಗಣರಾಜ್ಯವನ್ನು ನಿರ್ಮಿಸಬೇಕು’ ಎಂದು ಸಲಹೆ ನೀಡಿದರು. ‘ನಮ್ಮ ಕನಸುಗಳು ವಿಭಿನ್ನವಾಗಿರಬೇಕು. ಹುಟ್ಟು ಭವಿಷ್ಯವನ್ನು ನಿರ್ಧರಿಸದ ಉತ್ಪಾದಕ ವರ್ಗವನ್ನು ಮರೆತಿರದ ಆದರೆ ಅವರನ್ನು ಗೌರವಿಸುವ ನ್ಯಾಯವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸದ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೂಲಕ ತಲುಪಿಸಲ್ಪಡುವಂತಹ ಭಾರತವನ್ನು ನಾವು ನಿರ್ಮಿಸಬೇಕು’ ಎಂದರು. ಆರ್ಎಸ್ಎಸ್–ಬಿಜೆಪಿಯ ಮನುವಾದಿ ದೃಷ್ಟಿಕೋನವು ಸಾಮಾಜಿಕ ಡಾರ್ವಿನಿಸಂನ ಮಾರುವೇಷದಲ್ಲಿದೆ. ಅಲ್ಲಿ ಪ್ರಬಲರು ಮಾತ್ರ ಘನತೆಗೆ ಅರ್ಹರಾಗಿರುತ್ತಾರೆ. ಆದರೆ ನಮ್ಮ ಸಂವಿಧಾನವು ಬಲಿಷ್ಠರ ಬದುಕಿಗೆ ಭರವಸೆ ನೀಡುವುದಿಲ್ಲ ಬದಲಿಗೆ ದುರ್ಬಲರಿಗೆ ನ್ಯಾಯ ಹಾಗೂ ಭರವಸೆ ನೀಡುತ್ತದೆ. ಆದ್ದರಿಂದ ನಮ್ಮ ಸಂವಿಧಾನದ ರಕ್ಷಣೆಯಾಗಬೇಕು. ಸಂವಿಧಾನದ ರಕ್ಷಣೆಯ ಮೂಲಕ ಮಾತ್ರ ನಾವು ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಬಹುದು. ಸ್ವತಂತ್ರ ಭಾರತದಲ್ಲಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಇದು ಮಾತ್ರ ನಮ್ಮನ್ನು ಮನು ಧರ್ಮದ ಕ್ರೂರ ಕೈಗಳಿಂದ ರಕ್ಷಿಸುತ್ತದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.