ದಾವಣಗೆರೆ: ರಾಮಾಯಣ ಮಹಾಕಾವ್ಯದಲ್ಲಿರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣರು ಆದರ್ಶರಲ್ಲ, ಕ್ರೂರಿಗಳು ಎಂದು ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್ ಅಭಿಪ್ರಾಯಪಟ್ಟರು.

ಇಲ್ಲಿನ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬೇರು-ಚಿಗುರು ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶೂರ್ಪನಖಿಯ ಮೂಗು ಕತ್ತರಿಸಿದ ಲಕ್ಷ್ಮಣ, ಸೀತೆಯ ಮೇಲೆ ಸಂಶಯ ವ್ಯಕ್ತಪಡಿಸಿ ನಿರ್ಜನ ಕಾಡಿಗೆ ಅಟ್ಟಿದ ಶ್ರೀರಾಮ ಆದರ್ಶರಾಗಲು ಸಾಧ್ಯವಿಲ್ಲ. ಭಕ್ತಿಯ ಹೆಸರಿನಲ್ಲಿ ಆದರ್ಶರಂತೆ ಬಿಂಬಿಸಲಾಗಿದೆ. ಸೀತೆಯನ್ನು ಅಪಹರಿಸಿ ಜೀವನ ಹಾಳು ಮಾಡಿದ ರಾವಣ ಕೂಡ ಕ್ರೂರಿಯೇ’ ಎಂದು ಪ್ರತಿಪಾದಿಸಿದರು.

‘ಭಕ್ತಿಯ ಜೊತೆಗೆ ಬೆರೆತ ಮೌಢ್ಯಗಳು ಜನರ ವಿಚಾರಶಕ್ತಿಯನ್ನು ಹಾಳು ಮಾಡಿವೆ. ದೇಗುಲಗಳು ಜನರನ್ನು ಮೌಢ್ಯತೆಗೆ ತಳ್ಳುತ್ತಿವೆ. ಗ್ರಂಥಾಲಯಗಳು ಜ್ಞಾನಾರ್ಜನೆಯತ್ತ ಕರೆದೊಯ್ಯುತ್ತವೆ. ಮೌಢ್ಯಗಳಿಂದ ಹೊರಬರಲು ಶಿಕ್ಷಣವೇ ಪರಿಹಾರ’ ಎಂದರು.

‘ಮನುಷ್ಯನ ತಪ್ಪುಗಳೇ ಸಾಹಿತ್ಯ, ಮಹಾಕಾವ್ಯಗಳಾಗಿ ರೂಪಿತಗೊಂಡಿವೆ. ರಾಮಾಯಣ ಮತ್ತು ಮಹಾಭಾರತ ಕೂಡ ಇಂತಹದೇ ಸಾಹಿತ್ಯ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ, ಗುರಾಣಿ, ಖಡ್ಗ ಏನೂ ಇಲ್ಲ. ಮಹಾತ್ಮ ಗಾಂಧೀಜಿ ಕೈಯಲ್ಲಿ ಚರಕ ಮಾತ್ರ ಇದೆ. ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.