ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯಾಚಾರ: ಶಿಕ್ಷೆ ಪ್ರಮಾಣ ಶೇ 0.76ಕ್ಕೆ ಸೀಮಿತ

ಚೇತನ್‌ ಬಿ.ಸಿ.
Published : 26 ಆಗಸ್ಟ್ 2024, 0:36 IST
Last Updated : 26 ಆಗಸ್ಟ್ 2024, 0:36 IST
ಫಾಲೋ ಮಾಡಿ
Comments

ಬೆಂಗಳೂರು: ಅತ್ಯಾಚಾರ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳ
ಬೇಕು ಎಂಬ ಕೂಗು ದೇಶದಾದ್ಯಂತ ಕೇಳುತ್ತಿರುವ ಹೊತ್ತಿನಲ್ಲೇ, ಬೆಂಗಳೂರಿನಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಶಿಕ್ಷೆ ಪ್ರಮಾಣ ಶೇಕಡ 1ಕ್ಕಿಂತ ಕಡಿಮೆ ಇದೆ.

2013ರಿಂದ 2023ರವರೆಗೆ ಬೆಂಗಳೂರಿನಲ್ಲಿ ಒಟ್ಟು 1,322 ಅತ್ಯಾಚಾರ ಪ್ರಕರಣಗಳು ದಾಖಲಾಗಿ
ದ್ದರೆ, ಶಿಕ್ಷೆಯಾಗಿದ್ದು 10 ಪ್ರಕರಣಗಳಲ್ಲಿ ಮಾತ್ರ. ಇದು ಒಟ್ಟು ಪ್ರಕರಣಗಳ ಶೇಕಡ 0.76ರಷ್ಟು ಮಾತ್ರ.

ಇಂತಹ ಪ್ರಕರಣಗಳ ನಿರ್ವಹಣೆಯಲ್ಲಿ ಅನುಭವವಿರುವ ಹಿರಿಯ ಪೊಲೀಸ್‌ ಅಧಿಕಾರಿ
ಯೊಬ್ಬರು, ‘ಸಾಕ್ಷ್ಯ ಕೊರತೆ, ಸುಳ್ಳು ಪ್ರಕರಣಗಳ ಕಾರಣದಿಂದ ಶಿಕ್ಷೆ ಪ್ರಮಾಣ ಕಡಿಮೆಯಾದಂತೆ ತೋರಿದರೂ, ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತೆಯರೇ ಪ್ರತಿಕೂಲ ಸಾಕ್ಷಿಯಾಗಿ ಬದಲಾಗು
ತ್ತಾರೆ. ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತವೆ’ ಎಂದು ಶಿಕ್ಷೆ ಪ್ರಮಾಣ ಕಡಿಮೆ ಇರಲು ಕಾರಣವನ್ನು ವಿಶ್ಲೇಷಿಸುತ್ತಾರೆ.

‘ಸಹ ಜೀವನದ ಸಂಗಾತಿಗಳೂ ಅತ್ಯಾಚಾರ ಪ್ರಕರಣ ದಾಖಲಿಸಿರುತ್ತಾರೆ. ನಂತರ ಹೊಂದಿಕೊಂಡು
ಹೋಗುತ್ತಾರೆ. ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಪೋಷಕರು, ಆರೋಪಿಯನ್ನೇ ಮದುವೆ
ಆಗುವಂತೆ ಬಾಲಕಿಯರನ್ನು ಒತ್ತಾಯಿಸಿರುತ್ತಾರೆ. ಅವರು ಪ್ರತಿಕೂಲ ಸಾಕ್ಷಿಯಾಗುವ ಕಾರಣ ಈ ಪ್ರಕರಣಗಳೆಲ್ಲಾ ಬಿದ್ದುಹೋಗುತ್ತವೆ. ಹೀಗಾಗಿಯೇ ಶಿಕ್ಷೆಯಾಗುವ ಪ್ರಕರಣಗಳ ಸಂಖ್ಯೆ ಮತ್ತು ಪ್ರಮಾಣ ಕಡಿಮೆ ಎನಿಸುತ್ತದೆ’ ಎಂಬುದು ಅವರ ವಿವರಣೆ.

ಆದರೆ ತನಿಖೆ ಮತ್ತು ವಿಚಾರಣೆ ವಿಳಂಬವಾಗುವುದೂ ಇದಕ್ಕೆ ಒಂದು ಪ್ರಬಲ ಕಾರಣ ಎಂಬುದನ್ನು ಮಹಿಳಾ ಹಕ್ಕುಗಳ ಹೋರಾಟಗಾರರು ಹೇಳುತ್ತಾರೆ.

‘ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆ 5–6 ವರ್ಷಗಳವರೆಗೆ ಎಳೆಯುತ್ತದೆ, ಹಲವು ಪ್ರಕರಣಗಳಲ್ಲಿ
10 ವರ್ಷಗಳೇ ಆಗುತ್ತದೆ. ಇಂತಹ ಕೃತ್ಯಗಳ ಬಗ್ಗೆ ಪದೇ–ಪದೇ ನೆನಪಿಸಿಕೊಳ್ಳಲು ಮಹಿಳೆಯರು ಬಯಸುವುದಿಲ್ಲ. ಹೀಗಾಗಿಯೇ ಅಂತಹವರು ಪ್ರತಿಕೂಲ ಸಾಕ್ಷಿಗಳಾಗುತ್ತಾರೆ’ ಎಂಬುದು ಅಕ್ಕಮಹಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಅವರ ವಿಶ್ಲೇಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT