ಬಾಗಲಕೋಟೆ: ’ಬಾದಾಮಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಗ್ಗೆ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ವ್ಯಕ್ತಪಡಿಸಿರುವ ಬಹಿರಂಗ ಅತೃಪ್ತಿ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ದ್ಯೋತಕ ಹೊರತು ಯಾವುದೇ ಅಪಮಾನ ಅಲ್ಲ‘ ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮುಂದೆಯೇ ಮಾತನಾಡಬೇಕು. ಚಿಮ್ಮನಕಟ್ಟಿ ಮಾತಾಡಿರುವುದು ಗೌರವ ತರುವ ವಿಚಾರ. ಅವರು ತಮಗೆ ಅನ್ಯಾಯ ಆಗಿದೆ ಎಂದು ಹೇಳಿಕೊಂಡಿದ್ದಾರೆ. ತಪ್ಪು–ಸರಿ ಪಕ್ಷದವರು ತೀರ್ಮಾನಿಸಲಿದ್ದಾರೆ ಎಂದರು.

ಚಿಮ್ಮನಕಟ್ಟಿ ಬಹಿರಂಗವಾಗಿ ಹೇಳಿರುರುವುದು ಏನು ಭಾರಿ ತಪ್ಪು ಅಲ್ಲ. ಜಿಲ್ಲೆಯಲ್ಲಿ ಇಲ್ಲವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ. ಭಿನ್ನ ವಿಚಾರಗಳನ್ನು ಎತ್ತಿದರೆ ಅದಕ್ಕೆ ನೀವು (ಮಾಧ್ಯಮದವರು) ಬಣ ರಾಜಕಾರಣ ಎಂದು ಏಕೆ ಬಣ್ಣ ಕಟ್ಟುತ್ತೀರಿ. ಚಿಮ್ಮನಕಟ್ಟಿ ಅವರ ಅಸಮಾಧಾನದ ಹಿಂದೆಯೂ ಯಾವುದೇ ಬಣ ಕೆಲಸ ಮಾಡಿಲ್ಲ. ಬದಲಿಗೆ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅದನ್ನು ಸರಿಪಡಿಸುವ ಕೆಲಸಪಕ್ಷ ಮಾಡಲಿದೆ. ಸಂಪೂರ್ಣ ಅವರ ಮಾತುಗಳನ್ನು ಪಕ್ಷ ಗಮನಿಸಲಿದೆ ಎಂದು ಹೇಳಿದರು.

’ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿತ್ತು. ಮೂರು ಬಾರಿ ಸೋತಿದ್ದ ನನ್ನನ್ನು ಪಕ್ಷ ಕರೆದು ವಿಧಾನಪರಿಷತ್ ಸದಸ್ಯನಾಗಿ ಮಾಡಿದೆ. ಮಂತ್ರಿ ಸ್ಥಾನ ನೀಡಿದೆ. ಪಕ್ಷ ಎಲ್ಲರನ್ನೂ ಗಮನಿಸಲಿದೆ. ತಾಳ್ಮೆ ಬೇಕು‘ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.