ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನ್‌ ಮನೆಯಲ್ಲಿ ಹಲವು ವಸ್ತು ಜಪ್ತಿ

Published 16 ಜೂನ್ 2024, 4:28 IST
Last Updated 16 ಜೂನ್ 2024, 4:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ಐಡಿಯಲ್‌ ಹೋಮ್‌ ಟೌನ್‌ಶಿಪ್‌ನಲ್ಲಿ ಇರುವ ದರ್ಶನ್‌ ಅವರ ಮನೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಮಹಜರು ನಡೆಸಲಾಯಿತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಿಂದ ದರ್ಶನ್‌ ಅವರನ್ನು ಭದ್ರತೆಯಲ್ಲಿ ಕರೆದೊಯ್ದ ಪೊಲೀಸರು ಮಹಜರು ನಡೆಸಿದರು.

‘ಕೃತ್ಯ ನಡೆದ ಬಳಿಕ ದರ್ಶನ್ ಅವರು ಪಟ್ಟಣಗೆರೆ ಶೆಡ್‌ನಿಂದ ನೇರವಾಗಿ ತಮ್ಮ ಮನೆಗೆ ಬಂದಿದ್ದರು. ಬಂದ ಬಳಿಕ ಸ್ನಾನ ಮಾಡಿದ್ದರು. ರೇಣುಕಸ್ವಾಮಿ ಅವರ ಮೇಲೆ ದರ್ಶನ್‌ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯ ಗಳನ್ನು ಕಲೆ ಹಾಕಲಾಗಿದೆ. ದರ್ಶನ್‌ ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆಗಳು ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸಿ.ಸಿ. ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗೂ, ಅಂದು ದರ್ಶನ್‌ ಧರಿಸಿದ್ದ ಬಟ್ಟೆಗೂ ಹೋಲಿಕೆ ಮಾಡಲಾಗುವುದು’ ಎಂದು ಪೊಲೀಸರು ಹೇಳಿದರು.

‘ಇದು ಗಂಭೀರ ಪ್ರಕರಣ ಆಗಿರುವುದರಿಂದ ನಮಗೆ ಸಿಗುವ ಸಣ್ಣಪುಟ್ಟ ಸಾಕ್ಷ್ಯವನ್ನೂ ಕಲೆ ಹಾಕುತ್ತಿ ದ್ದೇವೆ. ದರ್ಶನ್ ಅವರ ಅಭಿಮಾನಿ ಗಳು, ಬೆಂಬಲಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಸೇರಿದರೆ ಮಹಜರು ನಡೆಸಲು ತೊಂದರೆ ಆಗಬಹುದು ಎಂಬ ಕಾರಣಕ್ಕೆ ತಡರಾತ್ರಿ ಅವರ ಮನೆಗೆ ಕರೆದೊಯ್ದು ದರ್ಶನ್‌ ಸಮ್ಮುಖದಲ್ಲೇ ಮಹಜರು ನಡೆಸಲಾಗಿದೆ. ಅರ್ಧ ತಾಸು ಪರಿಶೀಲನೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

ಮತ್ತೊಬ್ಬ ಆರೋಪಿ ವಿಚಾರಣೆ: ‘ಶುಕ್ರವಾರ ರಾತ್ರಿ ಮತ್ತೊಬ್ಬ ಆರೋಪಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇವರು ಆರೋಪಿಗಳ ಮೊಬೈಲ್‌ನ ದತ್ತಾಂಶ ಅಳಿಸಲು ಹಾಕಲು ನೆರವು ನೀಡಿದ್ದರು ಎಂಬ ಅನುಮಾನವಿದೆ’ ಎಂದು ಮೂಲಗಳು ಹೇಳಿವೆ.

ಹಲವು ಪ್ರಮುಖ ಸಾಕ್ಷ್ಯಗಳು ಲಭ್ಯ

ಅಪಹರಣ, ಕೊಲೆ ಪ್ರಕರಣದಲ್ಲಿ ಆರೋಪಿಗಳು ಒಂದೊಂದು ಪಾತ್ರ ವಹಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಟ್ಟಣಗೆರೆಯ ಶೆಡ್‌ನಲ್ಲಿ ಬಿದ್ದಿದ್ದ ರೇಣುಕಸ್ವಾಮಿ ತಲೆಕೂದಲು, ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಆರೋಪಿಗಳ ಮೊಬೈಲ್‌ ಲೊಕೇಶನ್‌ ಪರಿಶೀಲಿಸಲಾಗಿದೆ. ಜೂನ್‌ 8ರಂದು ರಾತ್ರಿ ಎಲ್ಲರೂ ಒಂದೇ ಟವರ್‌ ವ್ಯಾಪ್ತಿಯಲ್ಲಿ ಇರುವುದು ಪತ್ತೆಯಾಗಿದೆ. ಪವನ್ ಹಾಗೂ ಪವಿತ್ರಾಗೌಡ ಹೇಳಿದಂತೆ ಚಿತ್ರದುರ್ಗದಿಂದ ರೇಣುಕಸ್ವಾಮಿ ಅವರನ್ನು ಕರೆತರಲಾಗಿತ್ತು ಎಂದು ಆರೋಪಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಇದು ಮಹತ್ವದಾಗಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT