ಬೆಂಗಳೂರು:‘ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ಎಂಟ್ರಿಕೊಟ್ಟಿದ್ದಾರೆ. ಕಾದು ನೋಡೋಣ’ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರಅತೃಪ್ತ 12 ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಶಾಸಕರನ್ನು ಸಂಪರ್ಕ ಮಾಡ್ತಿದ್ದೇವೆ. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಡಿ.ಕೆ.ಶಿವಕುಮಾರ್ ನಾಲ್ವರನ್ನುಮನೆಗೆ ಕರೆದೊಯ್ದಿದ್ದಾರೆ. ಉಳಿದವರು ಯಾರು ಕೂಡ ಸಂಪರ್ಕಕ್ಕೆ ಸಿಗ್ತಿಲ್ಲ ಎಂದು ತಿಳಿಸಿದ್ದಾರೆ.

ರಾಜೀನಾಮೆ ಅಂಗೀಕಾರ ಆಗಿಲ್ಲ. ಸರ್ಕಾರ ಅಸ್ಥಿರ ಆಗೋದು ಹೇಗೆ? ಸ್ಪೀಕರ್ ಕಚೇರಿಯಲ್ಲಿ ಇಲ್ಲ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬರುತ್ತಿದ್ದಾರೆ. ಸರ್ಕಾರ ಏನೂ ಆಗಲ್ಲ ನಡೀರಿ ಎಂದು ಸಿದ್ದರಾಮಯ್ಯ ತಮ್ಮದೇ ದಾಟಿಯಲ್ಲಿ ಮಾಧ್ಯಮದವರಿಗೆಪ್ರತಿಕ್ರಿಯಿಸಿದರು.

* ಇದನ್ನೂ ಓದಿ:ಸಾಕಾಗಿದೆ, ಏನಾದರೂ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ದಿನೇಶ್ ಗುಂಡೂರಾವ್‌ಗೆ ಹೈಕಮಾಂಡ್ ಬುಲಾವ್

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿರುವುದರಿಂದ ಸದ್ಯ ವಿದೇಶದಲ್ಲಿರುವ ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕಾಂಗ್ರೆಸ್ ಹೈ ಕಮಾಂಡ್ ಬುಲಾವ್ ನೀಡಿದ್ದು, ಪ್ರವಾಸ ಮೊಟಕುಗೊಳಿಸಿ ಹಿಂದಿರುಗುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ತುರ್ತು ಸಭೆ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಸಂಜೆ ತುರ್ತು ಸಭೆ ಕರೆದಿದ್ದಾರೆ. ಪಕ್ಷದ ಹಿರಿಯ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಸಭೆ ಇದಾಗಿದೆ. ಹಾಲಿ ಸಚಿವರನ್ನು ಕೈ ಬಿಟ್ಟು ಅತೃಪ್ತರಿಗೆ ನೀಡಲು ಚಿಂತನೆ ಮಾಡಲಾಗಿದೆ. ಕೊನೆಯ ಕ್ಷಣದ ಕಸರತ್ತಿಗೆ ವೇಣುಗೋಪಾಲ್ ಮುಂದಾಗಿದ್ದಾರೆ.

ಮನವೊಲಿಕೆಗೆ ಯತ್ನ: ಈಶ್ವರ್ ಖಂಡ್ರೆ

ಎಲ್ಲರ ಮನವೊಲಿಸೋ ಪ್ರಯತ್ನ ಮಾಡುತ್ತಿದ್ದೇವೆ. ಶಾಸಕರು ಕೂಡ ಸ್ಪಂದನೆ ಮಾಡಿದ್ದಾರೆ. ಕಾದು ನೋಡೋಣ ಏನಾಗುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

‘ರಾಮಲಿಂಗಾರೆಡ್ಡಿ ಪಕ್ಷಕ್ಕೆ ತುಂಬಾ ನಿಷ್ಟರು’

ರಾಮಲಿಂಗಾರೆಡ್ಡಿ ಅವರು ನಮ್ಮ ಮೇಲೆ ಗರಂ ಆಗಿರೋದು ಊಹಾಪೋಹ. ರಾಮಲಿಂಗಾರೆಡ್ಡಿ ಪಕ್ಷಕ್ಕೆ ತುಂಬಾ ನಿಷ್ಟರಾಗಿದ್ದಾರೆ. ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಲು ಹೋಗಿದ್ದಾರೆ ಅಂತ ಆಲೋಚನೆ ಮಾಡಬೇಕಾಗಿದೆ. ನಮ್ಮ ಮುಂದೆ ಎಲ್ಲಾ ಆಯ್ಕೆಗಳು ಇವೆ. ಎಲ್ಲಾ ಕಾಂಗ್ರೆಸ್‌ನ ವರಿಷ್ಟರು ಹಾಗೂ ಹೈಕಂಮಾಡ್ ತೀರ್ಮಾನ ಮಾಡ್ತಾರೆ ಎಂದುಈಶ್ವರ್ ಖಂಡ್ರೆ ಹೇಳಿದರು.

* ಇವನ್ನೂ ಓದಿ...

*ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಸಿಬ್ಬಂದಿಗೆ ತಿಳಿಸಿದ್ದೇನೆ: ಸ್ಪೀಕರ್

*ರಾಜೀನಾಮೆ ಪರ್ವ | ರಾಜಭವನಕ್ಕೆ ತೆರಳಿದ 8 ಮಂದಿ ಶಾಸಕರು

*ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’

*ಮದ್ದಿಲ್ಲದ ರೋಗ; ಮಧ್ಯಂತರ ರಾಗ

*ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.