ಮೋಳೆ (ಬೆಳಗಾವಿ ಜಿಲ್ಲೆ): ಇಲ್ಲಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ ಅಪೂರ್ವಾ ಬಾಹುಬಲಿ ಟೋಪಗಿ ಅವರಿಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 14 ಅಂಕಗಳು ಹೆಚ್ಚುವರಿಯಾಗಿ ಲಭಿಸಿವೆ. ಇದರೊಂದಿಗೆ, ಒಟ್ಟು ಅಂಕಗಳು 617ಕ್ಕೆ ಏರಿಕೆಯಾಗಿವೆ.

‘ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಅಪೂರ್ವಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾರೆ. ದೃಷ್ಟಿದೋಷವುಳ್ಳ ವಿದ್ಯಾರ್ಥಿನಿಯರ ಪೈಕಿ ಉತ್ತಮ ಸಾಧನೆ ತೋರಿದ್ದಾರೆ ಎಂದು ಶಾಲೆಯವರು ಮಾಹಿತಿ ನೀಡಿದ್ದಾರೆ’ ಎಂದು ತಂದೆ ಬಾಹುಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರುಮೌಲ್ಯಮಾಪನದ ಬಳಿಕ ಇಂಗ್ಲಿಷ್‌ನಲ್ಲಿ 91ರಿಂದ 96, ರಾಜ್ಯಶಾಸ್ತ್ರದಲ್ಲಿ 98ರಿಂದ 100, ಅರ್ಥಶಾಸ್ತ್ರದಲ್ಲಿ 98ರಿಂದ 100 ಮತ್ತು ಸಮಾಜವಿಜ್ಞಾನದಲ್ಲಿ 93ರಿಂದ 98ಕ್ಕೆ ಏರಿಕೆಯಾಗಿದೆ.

‘ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದ ಕುರಿತು ಡಿಡಿ ಚಂದನ ವಾಹಿನಿಯಲ್ಲಿ ನುರಿತ ಶಿಕ್ಷಕರಿಂದ ಮಾಡಿದ ಪಾಠ ಪ್ರಸಾರ ಮಾಡಬೇಕು. ರೇಡಿಯೊದಲ್ಲಿ ಪಾಠ ಬಿತ್ತರ ಮಾಡಿದರೆ ಅನುಕೂಲ. ಇದರಿಂದ ನಮ್ಮಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಒತ್ತಾಯಿಸಿದರು.

‘ನಮಗೆ ಈ ಸೌಲಭ್ಯವಿಲ್ಲದೆ ಬಹಳ ತೊಂದರೆಯಾಯಿತು. ಪ್ಯಾಟ್ರನ್ ಕೂಡ ಗೊತ್ತಿರಲಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.