ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

169 ಮಂದಿಗೆ ‘ಅತ್ಯುತ್ತಮ ಕಂದಾಯ ಅಧಿಕಾರಿ’ ಪ್ರಶಸ್ತಿ

Published : 27 ಸೆಪ್ಟೆಂಬರ್ 2024, 15:50 IST
Last Updated : 27 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಅಧಿಕಾರಿಗಳಿಗೆ ಈ ವರ್ಷದಿಂದ ‘ಅತ್ಯುತ್ತಮ ಕಂದಾಯ ಅಧಿಕಾರಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2024ರ ಪ್ರಶಸ್ತಿಯನ್ನು 169 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಪ್ರತಿ ವರ್ಷ ನಡೆಸುವ ಕಂದಾಯ ದಿನಾಚರಣೆ ಈಗಾಗಲೇ ಮುಗಿದಿರುವ ಕಾರಣ ವಿಧಾನಸೌಧದ ಸಭಾಂಗಣದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು.

ನಾಲ್ವರು ಜಿಲ್ಲಾಧಿಕಾರಿಗಳು, 11 ಉಪ ವಿಭಾಗಾಧಿಕಾರಿಗಳು, 21 ತಹಶೀಲ್ದಾರರು, 36 ಗ್ರಾಮ ಆಡಳಿತಾಧಿಕಾರಿಗಳು, ನೋಂದಣಿ ಇಲಾಖೆ ಕೇಂದ್ರ ಕಚೇರಿ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ತಲಾ ಒಂಬತ್ತು ಅಧಿಕಾರಿಗಳು, ಭೂಮಾಪನ ಇಲಾಖೆಯ 83 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ವರ್ಷದಲ್ಲಿ ನಿರ್ವಹಿಸಿದ ಕೆಲಸದ ಸಾಮರ್ಥ್ಯ, ದಕ್ಷತೆ, ಕ್ರಿಯಾಶೀಲತೆಯ ಆಧಾರದಲ್ಲಿ ಪ್ರಶಸ್ತಿ ನೀಡಲಾಗಿದೆ. ಮುಂದಿನ ಬಾರಿಯಿಂದ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗುವುದು. ಹೆಚ್ಚುವರಿ ಜಿಲ್ಲಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT