ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿ ಲೋಪದ 54,175 ಪ್ರಕರಣ ದಾಖಲು: ತ್ವರಿತ ಇತ್ಯರ್ಥಕ್ಕೆ ಕೃಷ್ಣಬೈರೇಗೌಡ ಸೂಚನೆ

Published 22 ನವೆಂಬರ್ 2023, 16:47 IST
Last Updated 22 ನವೆಂಬರ್ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ಪಹಣಿ ಲೋಪದ (3 ಮತ್ತು 9ನೇ ಕಾಲಂನಲ್ಲಿ ವ್ಯತ್ಯಾಸ) 54,175 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ವಿಕಾಸಸೌಧದಲ್ಲಿ ಬುಧವಾರ ನಡೆದ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸರ್ವೇ ಇಲಾಖೆಯಲ್ಲಿನ ಗೊಂದಲಗಳ ಕಾರಣಕ್ಕೆ ರೈತರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ.  ಆಕಾರಬಂದು, ಆರ್‌ಟಿಸಿ ವ್ಯತ್ಯಾಸದ ಪ್ರಕರಣಗಳ ಕಾರಣಕ್ಕೆ ರೈತರು ನಿತ್ಯವೂ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಇಂತಹ 1,12,865 ಪ್ರಕರಣಗಳು ದಾಖಲಾಗಿವೆ. ಎಲ್ಲ ತಿದ್ದುಪಡಿಗಳಿಗೂ ಅಳತೆಯ ಅವಶ್ಯಕತೆ ಇದೆಯೆ ಎನ್ನುವುದನ್ನು ಖಚಿತಪಡಿಸಿಕೊಂಡು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪೋಡಿ ಮುಕ್ತ ಗ್ರಾಮ, ಎಲ್ಲೆಡೆ ಅಭಿಯಾನ: ಈಗಾಗಲೇ 17 ಸಾವಿರ ಗ್ರಾಮಗಳನ್ನು ಪೋಡಿಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. 14 ಸಾವಿರ ಗ್ರಾಮಗಳನ್ನು ಪೋಡಿ ಮುಕ್ತ ಎಂದು ಘೋಷಿಸುವುದು ಬಾಕಿ ಇದೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಡ್ರೋನ್ ತಂತ್ರಜ್ಞಾನ ಆಧಾರಿತ ಭೂ ಮರುಮಾಪನಕ್ಕೆ (ರೀ ಸರ್ವೇ) ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿದೆ. ಇದನ್ನೇ ಆಧರಿಸಿ ರಾಜ್ಯದ ಎಲ್ಲೆಡೆ ಭೂ ಮರುಮಾಪನ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದರು.

ಕಂದಾಯ- ಅರಣ್ಯ ಗಡಿ ನಿಗದಿಗೆ ಒತ್ತು: ಕಂದಾಯ ಹಾಗೂ ಅರಣ್ಯ ಜಮೀನುಗಳ ನಡುವಿನ ಗಡಿಯ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಜನರು  ತೊಂದರೆಗೆ ಒಳಗಾಗುತ್ತಿದ್ದಾರೆ. ಅಧಿಕಾರಿಗಳು ಅರಣ್ಯ ಹಾಗೂ ಕಂದಾಯ ಭೂಮಿಗಳ ಸರ್ವೆ ಮಾಡಿ, ಗಡಿ ಗುರುತಿಸಬೇಕು. ಹಲವು ಸ್ವರೂಪಗಳಲ್ಲಿರುವ ಸರ್ಕಾರಿ ಜಮೀನುಗಳನ್ನು ಅಳತೆ ಮಾಡಬೇಕು. ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT