ಬೆಂಗಳೂರು: ಶಿವಾಜಿನಗರದಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಗೆಲುವಿನಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ‘ಭಾಗ್ಯದ ಬಾಗಿಲು’ ತೆರೆದಿದೆ. ಸವದಿ ವಿಧಾನಪರಿಷತ್ ಪ್ರವೇಶಕ್ಕೆ ರಿಜ್ವಾನ್ ಗೆಲುವು ದಾರಿ ಮಾಡಿಕೊಟ್ಟಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸವದಿ ಅವರಿಗೆ ಬಿಎಸ್‌ವೈ ಸಂಪುಟದಲ್ಲಿ ಸಚಿವ ಸ್ಥಾನ ಅನಾಯಾಸವಾಗಿ ಸಿಕ್ಕಿತು. ಸಚಿವ ಸ್ಥಾನ ಉಳಿಸಿಕೊಳ್ಳಲು ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಬೇಕು.

ವಿಧಾನಸಭೆ ಸದಸ್ಯರಾಗಿ ರಿಜ್ವಾನ್ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಳಿಕ ಆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

‘ಉಪಚುನಾವಣೆಯನ್ನು ಯಾವಾಗ ಬೇಕಾದರೂ ನಡೆಸಬಹುದು. ಆದರೆ, ಸರ್ಕಾರ ಒತ್ತಡ ಹೇರಿ ಬೇಗ ನಡೆಸುವ ಸಾಧ್ಯತೆ ಇದೆ. ಸಂಪುಟಕ್ಕೆ ಸವದಿ ಸೇರ್ಪಡೆ ವರಿಷ್ಠರ ಆಯ್ಕೆ ಆಗಿರುವುದರಿಂದ ಅವರಿಗೆ ಆದಷ್ಟು ಬೇಗ ಪರಿಷತ್ತಿನಲ್ಲಿ ಸ್ಥಾನ ಕಲ್ಪಿಸಿಕೊಡಬೇಕಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.