ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ಸರ್ಕಾರದ ವರದಿಯಲ್ಲಿ ಸ್ಪಷ್ಟತೆಯಿಲ್ಲ. ಆಡಳಿತದ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ.
ನ್ಯಾ.ಎಂ.ಜಿ.ಎಸ್.ಕಮಲ್
ಸರ್ಕಾರ ಅಂತಿಮ ವರದಿ ಸಲ್ಲಿಸುವ ಬದಲು ಪ್ರಾಥಮಿಕ ವರದಿ ಸಲ್ಲಿಸಿದೆ. ಹಲವು ಸಂಘಟನೆಗಳು ಏಕಕಾಲಕ್ಕೆ ಮೆರವಣಿಗೆ ನಡೆಸಿದರೆ ಕಾನೂನು ಸುವ್ಯವಸ್ಥೆಯ ಆತಂಕ ವ್ಯಕ್ತಪಡಿಸಿರುವ ಜಿಲ್ಲಾಡಳಿತ ತನ್ನ ಅಸಮರ್ಥತೆ ತೋರಿಸಿ ಕೊಂಡಂತಾಗಿದೆ
ಕಾಡ್ಲೂರು ಸತ್ಯನಾರಾಯಣಾಚಾರ್ಯ, ಅರ್ಜಿದಾರರ ಪರ ವಕೀಲ
ನ.2ರಂದು ಹಲವು ಸಂಘಟನೆಗಳು ಮೆರವಣಿಗೆಗೆ ಅವಕಾಶ ಕೋರಿದ್ದಾಗಿ ಸರ್ಕಾರ ಹೇಳಿದೆ. ಅದಕ್ಕೆ ಕೋರ್ಟ್ ಶಾಂತಿಸಭೆ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗ ತೋರಿದೆ