ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪೋರ್ಟಲ್‌ ಪ್ರಶ್ನಿಸಿದ ಎಕ್ಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Published : 24 ಸೆಪ್ಟೆಂಬರ್ 2025, 16:17 IST
Last Updated : 24 ಸೆಪ್ಟೆಂಬರ್ 2025, 16:17 IST
ಫಾಲೋ ಮಾಡಿ
Comments
ನ್ಯಾ.ಎಂ.ನಾಗಪ್ರಸನ್ನ
ನ್ಯಾ.ಎಂ.ನಾಗಪ್ರಸನ್ನ
ಮಾಹಿತಿ ಮತ್ತು ಸಂಹವನವು ನಿಯಂತ್ರಣಕ್ಕೆ ಒಳಪಟ್ಟಿದ್ದು ಈಗಿನ ವಾಟ್ಸ್‌ ಆ್ಯಪ್‌ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ ಚಾಟ್‌ ಎಲ್ಲವೂ ಸ್ಥಳೀಯ ಮತ್ತು ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿವೆ.
ನ್ಯಾ. ಎಂ.ನಾಗಪ್ರಸನ್ನ
ನ್ಯಾಯಪೀಠದ ಕಳವಳ
‘ಈ ಅರ್ಜಿದಾರರ ಮೂಲ ಸ್ಥಾನ ಅಮೆರಿಕ. ಅಮೆರಿಕದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲಾಗುತ್ತಿದೆ. ಅಲ್ಲದೆ ಪ್ರತಿಯೊಂದು ಸಾರ್ವಭೌಮ ರಾಷ್ಟ್ರಗಳೂ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುತ್ತಿವೆ. ನಿಯಂತ್ರಣವಿಲ್ಲದ ವಾಕ್​ ಸ್ವಾತಂತ್ರ್ಯವು ಕಾನೂನು ಬಾಹಿರ ನಡವಳಿಕೆಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ‘ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಖಾಡದಂತಿದ್ದು ಇವುಗಳು ಅರಾಜಕತಾ ವಾದ ಬಿತ್ತುವುದಕ್ಕೆ ಸ್ವಾತಂತ್ರ್ಯ ನೀಡಲಾಗದು. ಈ ಕ್ಷೇತ್ರವನ್ನು ನಿಯಂತ್ರಣ ಮಾಡುವುದು ಹೊಸದೂ ಅಲ್ಲ ವಿಶಿಷ್ಟವೂ ಅಲ್ಲ. ನಮ್ಮ ರಾಷ್ಟ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ವೇದಿಕೆಯೂ ತನಗಿರುವ ಸ್ವಾತಂತ್ರ್ಯವನ್ನು ಜವಾಬ್ದಾರಿಯೊಂದಿಗೆ ನಿಭಾಯಿಸಬೇಕು ಮತ್ತು ದೇಶದಲ್ಲಿ ಕಾರ್ಯನಿರ್ವಹಣೆಗೆ ಅಧಿಕಾರ ಪಡೆದಲ್ಲಿ ಹೊಣೆಗಾರಿಕೆಯನ್ನು ಅನುಸರಿಸುವುದು ಗಂಭೀರ ಕರ್ತವ್ಯ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT