ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಸಾಧಕರಿಗೆ ಸರ್ದಾರ್‌ ಜೋಗಾ ಸಿಂಗ್‍ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ  

Last Updated 26 ಡಿಸೆಂಬರ್ 2022, 8:41 IST
ಅಕ್ಷರ ಗಾತ್ರ

ಬೀದರ್: ಶ್ರೀನಾನಕ ಝೀರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಸರ್ದಾರ್‌ ಜೋಗಾಸಿಂಗ್‌ಜಿ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಜನರಿಗೆ ‘ಸರ್ದಾರ್‌ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ನಿವೃತ್ತ ರಾಜ್ಯಪಾಲ ಪಂಜಾಬ್ ವಿಧಾನಸಭೆಯ ಸಭಾಪತಿ ಸರ್ದಾರ್ ಕುಲ್ತಾರಸಿಂಗ್ ಸಂಧ್ವಾನ್,ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸರ್ದಾರ್ ಚಿರಜೀವಿಸಿಂಗ್, ಬೀದರ್‌ನ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ,ರಾಜ್ಯಸಭಾ ಸದಸ್ಯ ಎಸ್. ವಿಕ್ರಮಜೀತಸಿಂಗ್ ಸಾಯನಿ, ನಿಜಾಮಾಬಾದ್‌ ಶಾಸಕ ಬಿಗ್ಲಾ ಗಣೇಶ ಗುಪ್ತಾ, ದೆಹಲಿಯ ಮಾಜಿ ಶಾಸಕ ಸರ್ದಾರ್ ಜಿತೇಂದ್ರಸಿಂಗ್ ಶಂಟಿ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಕಲಬುರಗಿಯ ರೆ. ಡಾ. ರಾಬರ್ಟ್ ಮೈಕಲ್ ಮಿರಾಂಡಾ, ಭಾರತೀಯ ಪ್ಯಾರಾಒಲಿಂಪಿಕ್ ಸಮಿತಿ ಅಧ್ಯಕ್ಷೆ ದೀಪಾ ಮಲಿಕ್, ಬೆಂಗಳೂರಿನ ಡಾ. ಸಮರ್ಧ ರಾಘವ್ ನಾಗಭೂಷಣ, ಬೀದರ್‌ನ ಹುಮ್ಯಾನಿಟಿ ಫಸ್ಟ್‌ ಫೌಂಡೇಷನ್ ಅಧ್ಯಕ್ಷ ಮಾಜೀದ್ ಬಿಲಾಲ್ ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್. ಆರ್. ಶೆಟ್ಟಿ,ಕಲಬುರಗಿಯ ಖಾಜಾ ಬಂದೇನವಾಜ್ ವಿಶ್ವ ವಿದ್ಯಾಲಯದ ಕುಲಪತಿ ಸೈಯದ್ ಷಾ ಖುಶ್ರೋ ಹುಸೈನಿ, ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರ ಪರವಾಗಿ ಅವರ ಪ್ರತಿನಿಧಿಗಳಿಗೆ ಪ್ರಶಸ್ತಿ ಸ್ವೀಕರಿಸಿದರು.

ನಾಂದೇಡ್‍ನ ಕಾರಸೇವಾ ವಾಲೆ ಸಂತ್ ಬಾಬಾಬಲವಿಂದರ್ ಸಿಂಗ್, ಡಾ. ಅನಿಲ, ಡಿ.ಸಹಸ್ರಬುದ್ಧೆ, ಜನರಲ್ ಸರ್ದಾರ್ ಜೋಗಿಂದರ್ ಜಸ್ವಂತ್ ಸಿಂಗ್ ಬಂದಿರಲಿಲ್ಲ.

ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿಸಿಂಗ್ ಉಪನ್ಯಾಸ ನೀಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ,ಶ್ರೀನಾನಕ ಝೀರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಎಸ್ ಬಲಬೀರಸಿಂಗ್, ಡಾ. ಸಿ ಮನೋಹರ ಇದ್ದರು. 'ಪಂತ ರತ್ನ ಶಿರೋಮಣಿ ಸರ್ದಾರ್ ಜೋಗಾಸಿಂಗ್‌ಜಿ'ಜೀವನ ಚರಿತ್ರೆ ಬಿಡುಗಡೆ ಮಾಡಲಾಯಿತು. ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ರೇಷ್ಮಾ ಕೌರ್ ಸ್ವಾಗತಿಸಿದರು. ಸರ್ದಾರ್‌ ಪ್ರೀತಂ ಸಿಂಗ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT