ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರ ಅನುದಾನ ಬೇರೆ ಉದ್ದೇಶಕ್ಕೆ ಬಳಕೆ ಇಲ್ಲ: ಮುಖ್ಯಮಂತ್ರಿ ಭರವಸೆ

ದಲಿತ ಸಂಘಟನೆಗಳಿಗೆ ಬಿಎಸ್‌ವೈ ಭರವಸೆ
Published : 17 ಸೆಪ್ಟೆಂಬರ್ 2019, 19:19 IST
ಫಾಲೋ ಮಾಡಿ
Comments

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಹಣವನ್ನು ಬೇರೆ ಯೋಜನೆಗಳು ಅಥವಾ ಉದ್ದೇಶಗಳಿಗೆ ವರ್ಗಾಯಿಸುವು ದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಲಿತ ಸಂಘಟನೆಗಳಿಗೆ ಭರವಸೆ ನೀಡಿದ್ದಾರೆ.

ನೆರೆಪೀಡಿತ ಪ್ರದೇಶದಲ್ಲಿ ಹಾನಿಗೀಡಾದ ಈ ವರ್ಗದವರ ವಸತಿ ನಿರ್ಮಾಣಕ್ಕಾಗಿ ಮಾತ್ರ ಹಣ ಬಳಸಲಾಗುವುದು. 30x40 ಅಡಿ ವಿಸ್ತೀರ್ಣದಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದುದಲಿತ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

ಸರ್ಕಾರ ಈ ಹಣವನ್ನು ಕೇವಲ ದಲಿತರಿಗೆ ಮನೆ ಕಟ್ಟಿಕೊಡುವುದಕ್ಕೆ ಬಳಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ಪ್ರವಾಹದ ಸಂದರ್ಭದಲ್ಲಿ ಈ ವರ್ಗಕ್ಕೆ ಸೇರಿದವರ ಶೇ 90 ರಷ್ಟು ಮನೆಗಳು ಹಾನಿಗೀಡಾಗಿವೆ ಎಂದು ಅವರು ತಿಳಿಸಿದರು

‘ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಎಸ್‌ಸಿಪಿಟಿಎಸ್‌ಪಿ ಹಣವನ್ನು ಇತರ ಕಾರ್ಯಗಳಿಗೆ ಅದರಲ್ಲೂ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯಕ್ಕೆ ವರ್ಗಾಯಿಸುವುದನ್ನು ವಿರೋಧಿಸಿದೆವು. ಇದಕ್ಕೆ ಸಮಜಾಯಿಷಿ ನೀಡಿದ ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಹಣ ಬೇರೆಯವರಿಗೆ ಬಳಸುವುದಿಲ್ಲ. ನೆರೆಯಿಂದ ಸಂತ್ರಸ್ತರಾದ ಪರಿಶಿಷ್ಟರ ಕಲ್ಯಾಣಕ್ಕೇ ಬಳಸಲಾಗುವುದು’ ಎಂದು ಭರವಸೆ ನೀಡಿದರು.

ದಲಿತರ ಸಮಸ್ಯೆಗಳನ್ನು ಆಲಿಸಲು ಸದ್ಯವೇ ದಲಿತ ಸಂಘಟನೆಗಳ ಪ್ರತಿನಿಧಿಗಳ ಸಭೆಯೊಂದನ್ನು ಕರೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ದಲಿತರಿಗೆ ಯಾವುದೇ ಸಮಸ್ಯೆ ಉದ್ಭವಿಸಿದರೂ ತಕ್ಷಣವೇ ತಾವು ಸ್ಪಂದಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT