ಬೆಳಗಾವಿ: ರಾಜ್ಯ ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 17 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 7ರಷ್ಟು ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳನ್ನು (ರಿಕ್ತ ಸ್ಥಾನ) ಗುರುತಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಒಟ್ಟು 100 ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 1, 9, 15, 23, 27,33, 41,46, 49, 53, 59, 67, 75, 81, 89, 93, 96 (ಒಟ್ಟು 17), ಪರಿಶಿಷ್ಟ ಪಂಗಡಕ್ಕೆ 3, 18, 32, 39, 62, 71, 88 (ಒಟ್ಟು 7) ಹುದ್ದೆಗಳನ್ನು ಮೀಸಲು ಹುದ್ದೆಗಳೆಂದು ನಿಗದಿಪಡಿಸಲಾಗಿದೆ.

ಹುದ್ದೆಗಳ ರಿಕ್ತ ಸ್ಥಾನಗಳನ್ನು ಪರಿಷ್ಕರಿಸಿದ್ದರಿಂದ ಇನ್ನು ಮುಂದೆ ಶೇಕಡಾವಾರು ಮೀಸಲಾತಿಯು ಪ್ರವರ್ಗ 1– 4, ಪ್ರವರ್ಗ 2ಎ– 15, ಪ್ರವರ್ಗ 2ಬಿ –4, ಪ್ರವರ್ಗ 3ಎ– 4, ಪ್ರವರ್ಗ 3ಬಿ– 5, ಪರಿಶಿಷ್ಟ ಜಾತಿ– 17, ಪರಿಶಿಷ್ಟ ವರ್ಗ– 7, ಸಾಮಾನ್ಯ ಅರ್ಹತೆಗೆ – 44 (ಒಟ್ಟು 100) ಲಭ್ಯವಾಗಲಿದೆ.

ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ. ಆದರೆ, ಯಾವುದೇ ವೃಂದದ ಹುದ್ದೆಗಳಿಗೆ ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದರೆ, ಅಂಥ ಪ್ರಕ್ರಿಯೆಯನ್ನು ಈ ಹಿಂದಿನ ಮೀಸಲಾತಿಯಂತೆ (ಎಸ್‌ಸಿ 15, ಎಸ್‌ಟಿ 3 ಹುದ್ದೆ) ಪೂರ್ಣಗೊಳಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.