ಬೆಂಗಳೂರು: ‘ಪ್ರಸಕ್ತ ಶೈಕ್ಷಣಿಕ ವರ್ಷದ ಮಟ್ಟಿಗೆ ಶುಲ್ಕ ಹೆಚ್ಚಿಸುವುದಿಲ್ಲ. ಸರ್ಕಾರ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದರೆ ಅದನ್ನು ಪಾಲಿಸುತ್ತೇವೆ’ ಎಂದು ಕರ್ನಾಟಕ ಖಾಸಗಿ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ನಿರ್ಧರಿಸಿದೆ. ರುಪ್ಸಾ ಕರ್ನಾಟಕ ಸೇರಿದಂತೆ 12 ಸಂಘಟನೆಗಳು ಭಾನುವಾರ ವರ್ಚುವಲ್‌ನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿವೆ.

ಬಳಿಕ ಮಾತನಾಡಿದ ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ನಮ್ಮ ವ್ಯಾಪ್ತಿಯಲ್ಲಿ 10 ಸಾವಿರ ಶಾಲೆಗಳಿವೆ. ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ, ಈ ವರ್ಷದ ಮಟ್ಟಿಗೆ ಶುಲ್ಕ ಹೆಚ್ಚಿಸದೆ, ಎರಡು ವರ್ಷದ ಹಿಂದೆ ಪಡೆಯುತ್ತಿದ್ದ ಶುಲ್ಕವನ್ನೇ ಈ ಬಾರಿಗೂ ನಿಗದಿ ಮಾಡಿದ್ದೇವೆ’ ಎಂದರು.

‘ಅಲ್ಲದೆ, ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ’ ಎಂದರು.

‘ಬಾಕಿ ಶುಲ್ಕ ಉಳಿಸಿಕೊಂಡಿರುವ ಶುಲ್ಕವನ್ನು ಪೋಷಕರು ಪಾವತಿಸುವಂತೆ ಸರ್ಕಾರ ಕ್ರಮ ವಹಿಸಬೇಕು, ಆರ್‌ಟಿಇ ಶುಲ್ಕ ಮರುಪಾವತಿ ಮಾಡಬೇಕು, ಪ್ರಥಮ ಪಿಯುಸಿ ದಾಖಲಾತಿಗೆ ಅವಕಾಶ ನೀಡಬೇಕು. ಶಾಲೆಗಳು ಪಡೆದಿರುವ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಬೇಕು’ ಎಂದು ಒಕ್ಕೂಟದ ಬೇಡಿಕೆಗಳನ್ನು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.