ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಶಂಕರಪ್ಪ ಅಜ್ಞಾನಿ: ಮಾತೆ ಮಹಾದೇವಿ

Last Updated 10 ಆಗಸ್ಟ್ 2018, 18:54 IST
ಅಕ್ಷರ ಗಾತ್ರ

ಕೂಡಲಸಂಗಮ: ‘ಲಿಂಗಾಯತನೋ, ವೀರಶೈವನೋ ಎಂಬುದು ಗೊತ್ತಿರದ ಶಾಮನೂರು ಶಿವಶಂಕರಪ್ಪ ಅವರಿಗೆ ಲಿಂಗಾಯತದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಂಸ್ಥೆಯೊಂದರ ಅಧ್ಯಕ್ಷರಾದ ಅವರು, ತಮ್ಮ ಧರ್ಮದ ಅರಿವೇ ಇಲ್ಲದಷ್ಟು ಅಜ್ಞಾನಿಯಾಗಿದ್ದಾರೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಟೀಕಿಸಿದ್ದಾರೆ.

‘ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಲು ಲಿಂಗಾಯತ, ವೀರಶೈವ ಸಮುದಾಯದ ಶಾಸಕರು, ಸಂಸದರು ಸೇರಿ 79 ಮಂದಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, 18 ಶಾಸಕರಷ್ಟೇ ಹೋಗಿದ್ದರು. ಇವರಲ್ಲಿ ಬಹುತೇಕರು, ವೀರಶೈವ ಮಹಾಸಭಾದ ಪದಾಧಿಕಾರಿಗಳು ಹಾಗೂ ಬಿಜೆಪಿಯ ಶಾಸಕರೇ ಆಗಿದ್ದರು. ಉಳಿದ ಜನಪ್ರತಿನಿಧಿಗಳು ಏಕೆ ಬರಲಿಲ್ಲ ಎಂಬುದನ್ನು ಶಾಮನೂರು ಅರಿಯಬೇಕು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಒಬ್ಬ ಅಧಿಕಾರಿಯಾಗಿ ಡಾ.ಶಿವಾನಂದ ಜಾಮದಾರ ಅವರು ಕೂಡಲಸಂಗಮ, ಬಸವ ಕಲ್ಯಾಣ, ತಂಗಡಗಿ, ಬಸವನಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಚಿಕ್ಕಸಂಗಮ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. 50 ವರ್ಷಗಳಿಂದ ರಾಜಕೀಯದಲ್ಲಿರುವ ನೀವು, ಶರಣರ ಸ್ಥಳಗಳ ಅಭಿವೃದ್ಧಿಗೆ, ವಚನ ಸಾಹಿತ್ಯ ಪ್ರಸಾರಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ. ಲಿಂಗಾಯತ ಹೋರಾಟದಲ್ಲಿ ಮಹಮ್ಮದ್ ಅಲಿ ಜಿನ್ನಾನ ಕಾರ್ಯ ಯಾರು ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತು’ ಎಂದು ಟೀಕಿಸಿದ್ದಾರೆ.

‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕಲ್ಪಿಸುವಂತೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈಗ, ನಮ್ಮ ಹೋರಾಟ ಕೇಂದ್ರ ಸರ್ಕಾರದ ಮೇಲೆ ಕೇಂದ್ರೀಕೃತವಾಗಿದೆ. ಸಂವಿಧಾನಾತ್ಮಕ ಮನ್ನಣೆ ಸಿಗುವತನಕ ಈ ಚಳವಳಿ ನಿಲ್ಲುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT