ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮುಖ ನೋಡಿ ವೋಟು ಕೊಡಬೇಕಾ?: ಎಚ್‌ಡಿಕೆ ಪ್ರಶ್ನೆ

Published 27 ಏಪ್ರಿಲ್ 2023, 14:32 IST
Last Updated 27 ಏಪ್ರಿಲ್ 2023, 14:32 IST
ಅಕ್ಷರ ಗಾತ್ರ

ತುಮಕೂರು: ‘ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳದೆ ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ವೋಟು ಕೊಡಿ ಎಂದು ಎನ್ನುತ್ತಿದ್ದಾರೆ. ಮೋದಿ ನೋಡಿ ವೋಟು ಹಾಕಬೇಕೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹ್ಮದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

‘ರಾಜ್ಯಕ್ಕೆ ಮೋದಿ ಅವರ ಕೊಡುಗೆ ಏನು? ಯಾವ ಕೊಡುಗೆ ಕೊಟ್ಟಿದ್ದಾರೆ, ನೆರವು ನೀಡಿದ್ದಾರೆ ಎಂದು ಅವರು ವೋಟು ಕೇಳುತ್ತಾರೆ’ ಎಂದರು.

ದಾಸರು, ರಾಣಿ ಅಬ್ಬಕ್ಕ ಅವರಂತಹವರನ್ನು ನೆನಪಿಸಿಕೊಂಡು ವೋಟು ಕೊಡಿ ಎನ್ನುತ್ತಿದ್ದಾರೆ. ನೆರೆ, ಬರ ಬಂದಾಗ ನೆರವು ನೀಡದೆ ಈಗ ಹೇಗೆ ವೋಟು ಕೇಳುತ್ತಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು. 

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ನಾಮ ಹಾಕಿದರು. ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿ ಕಿತ್ತುಕೊಂಡರು. ಸುಪ್ರೀಂ ಕೋರ್ಟ್‌ನಲ್ಲಿ ಒಂದು ಹೇಳಿಕೆ, ಹೊರಗಡೆ ಅದಕ್ಕೆ ತದ್ವಿರುದ್ಧ ಹೇಳಿಕೆ ಕೊಡುತ್ತಾರೆ. ಮೀಸಲಾತಿ ವಿಚಾರವನ್ನು ಯಾವ ಕೆರೆಗೆ ತೆಗೆದುಕೊಂಡು ಹೋಗಿ ಹಾಕಿದ್ದಾರೊ ಗೊತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT