ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ರತ್ನ ಕೇಳಿ ಪಡೆದರೆ ವಿಷ: ಸಿದ್ಧಲಿಂಗ ಸ್ವಾಮೀಜಿ

Last Updated 28 ಮಾರ್ಚ್ 2022, 19:41 IST
ಅಕ್ಷರ ಗಾತ್ರ

ತುಮಕೂರು: ‘ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವಂತೆ ಯಾರನ್ನೂ ಕೇಳಬಾರದು. ಅದಾಗಿ ಬಂದರೆ ಅಮೃತ‌ಕ್ಕೆ ಸಮಾನ. ಕೇಳಿ ಬಂದದ್ದು ವಿಷಕ್ಕೆ ಸಮಾನ’ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‘ಭಾರತ ರತ್ನ ಕೊಡುವಂತೆ ಯಾರೂ ಕೇಳಬಾರದು. ನಾವೂ ಕೇಳುವುದಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ. ಇದನ್ನು ಯಾರೂ ಮೀರಬಾರದು. ಪ್ರಶಸ್ತಿ ಬಂದ ತಕ್ಷಣ ಯಾರ ಗೌರವವೂ ಹೆಚ್ಚಾಗುವುದಿಲ್ಲ’ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಏಪ್ರಿಲ್‌ 1ರಂದು ಮಠದಲ್ಲಿ ನಡೆಯುವ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವರು. ಈ ಸಂಬಂಧಸಿದ್ಧತೆ ಕುರಿತು ಮಠಕ್ಕೆ ಭೇಟಿ ನೀಡಿದ್ದ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಸಿದ್ಧಲಿಂಗ ಸ್ವಾಮೀಜಿ ಜತೆ ಚರ್ಚಿಸಿದರು. ‘ಭಾರತ ರತ್ನ’ ಪ್ರಶಸ್ತಿ ನೀಡುವ ವಿಚಾರವನ್ನು ಅಮಿತ್ ಶಾ ಬಳಿ ಪ್ರಸ್ತಾಪಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT