ಬೆಂಗಳೂರು: ‘ಜಾತಿ ಜನಗಣತಿಯನ್ನು ದೇವೇಗೌಡರಾಗಲೀ, ನಮ್ಮ ಪಕ್ಷವಾಗಲೀ ವಿರೋಧಿಸಿಲ್ಲ. ರಾಜ್ಯ ಸರ್ಕಾರದ ಜಾತಿ ಜನಗಣತಿ ಸರಿಯಾಗಿಲ್ಲ ಎಂಬುದಷ್ಟೇ ನಮ್ಮ ಪ್ರತಿಪಾದನೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಥಮಾಡಿಕೊಳ್ಳದೆ, ಲಘುವಾಗಿ ಮಾತನಾಡುತ್ತಿದ್ದಾರೆ’ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.

ಜಾತಿ ಗಣತಿ ವಿಷಯದಲ್ಲಿ ದೇವೇಗೌಡ ಅವರು ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಜೆಡಿಎಸ್ ಪ್ರತಿಕ್ರಿಯೆ ನೀಡಿದೆ.

‘ದೇವೇಗೌಡರ ಗರಡಿಯಲ್ಲೇ ಬೆಳೆದು, ಈಗ ಅವರ ವಿರುದ್ಧವೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ನಿಜವಾಗಿಯೂ ಇಬ್ಬಗೆಯ ನೀತಿ ಅವರದ್ದೇ. ನಿಜವಾಗಿಯೂ ಅವರದ್ದು ಒಂದು ದೇಹ, ಎರಡು ನಾಲಿಗೆ. ದೇವೇಗೌಡರನ್ನು ರಚನಾತ್ಮಕವಾಗಿ ಟೀಕಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅನಗತ್ಯ ವಿಷಕಾರುವುದು ಸರಿಯಲ್ಲ’ ಎಂದಿದೆ.

‘ಇದೇ ಸಿದ್ದರಾಮಯ್ಯ ಅವರು ಜನತಾ ಪರಿವಾರದಲ್ಲಿದ್ದಾಗ ಇಂದಿರಾ ಗಾಂಧಿ ವಿರುದ್ಧ ಅಣಿಮುತ್ತುಗಳನ್ನು ಉದುರಿಸಿದ್ದರು. ಅದನ್ನು ಈಗಿನ ಕಾಂಗ್ರೆಸ್ ನಾಯಕರು ಸಹಿಸಿಕೊಳ್ಳಬಲ್ಲರೇ? ಇಂದಿರಾ ಗಾಂಧಿ ಅವರು ಈಗ ಜೀವಂತವಾಗಿಲ್ಲ. ಹೀಗಾಗಿ ನಾವು ಅವರ ವಿರುದ್ಧದ ಟೀಕೆಗಳನ್ನು ಮುನ್ನೆಲೆಗೆ ತರುತ್ತಿಲ್ಲ. ಸಿದ್ದರಾಮಯ್ಯ ಅವರು ಅನಗತ್ಯ ಟೀಕೆಯನ್ನು ನಿಲ್ಲಿಸದೇ ಇದ್ದರೆ, ಅವೆಲ್ಲವನ್ನೂ ಹೆಕ್ಕಿ–ಹೆಕ್ಕಿ ಜನತೆಯ ಮುಂದೆ ಇಡುತ್ತೇವೆ. ಇದು ನಮ್ಮ ಎಚ್ಚರಿಕೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.