ಕ್ಯೂಆರ್ ಕೋಡ್‌ನಲ್ಲಿ ಸಿಗಲಿದೆ ಮಾಹಿತಿ
ವಿಶೇಷ ರಹದಾರಿಯಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಯಾವುದೇ ರಾಜ್ಯದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನದ ಪೂರ್ಣ ಮಾಹಿತಿ ಸಿಗುತ್ತದೆ. ವಾಹನದ ನೋಂದಣಿ ಸಂಖ್ಯೆ ಹಾಕಿದರೂ ಮಾಹಿತಿ ಸಿಗುತ್ತದೆ. ಅಂಥ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ತಿಳಿಸಿದರು.
ವಾಹನಗಳ ಯೋಗ್ಯತಾ ಪ್ರಮಾಣಪತ್ರ, ತೆರಿಗೆ, ಮೂಲ ರಹದಾರಿಗಳು ಸರಿ ಇವೆಯೇ ಎಂದು ವಾಹನ್–4 ಪರಿಶೀಲನೆ ಮಾಡುತ್ತದೆ. ಸರಿ ಇದ್ದರೆ ಹಣ ತುಂಬುವ ಆಯ್ಕೆ ಬರುತ್ತದೆ ಎಂದು ಮಾಹಿತಿ ನೀಡಿದರು.