ಬೆಂಗಳೂರು: ಹದಿನಾರನೇ ವಿಧಾನಸಭೆ ಅಂತ್ಯವಾಗುವ 2028ರ ವೇಳೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ ₹9.25 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಆರ್ಥಿಕ ಇಲಾಖೆ ಮುನ್ನಂದಾಜು ಮಾಡಿದೆ. ಆ ಹೊತ್ತಿಗೆ ವಾರ್ಷಿಕ ಬಡ್ಡಿ ಪಾವತಿಯ ಮೊತ್ತ ₹60,306 ಕೋಟಿ ದಾಟಲಿದೆ ಎಂದೂ ಅಂದಾಜಿಸಲಾಗಿದೆ.

2025–26ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ವಿತ್ತೀಯ ಕೊರತೆಯು ₹90,428 ಕೋಟಿಗಳಷ್ಟಾಗಲಿದೆ ಎಂದು ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಹೇಳಿದ್ದು, ಈ ಆರ್ಥಿಕ ವರ್ಷದಲ್ಲಿ ಗರಿಷ್ಠ ₹1.16 ಲಕ್ಷ ಕೋಟಿ ಸಾಲ ಎತ್ತಲು ಅವಕಾಶ ಮಾಡಿಕೊಳ್ಳಲಾಗಿದೆ.

ಮುಂಬರುವ ಆರ್ಥಿಕ ವರ್ಷಗಳಲ್ಲಿ ವೇತನ–ಪಿಂಚಣಿ ಮತ್ತಿತರ ಬದ್ಧ ವೆಚ್ಚಗಳಲ್ಲಿ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿರುವ ಕಾರಣ, ರಾಜ್ಯದ ಮೇಲಿನ ಹಣಕಾಸು ಹೊರೆಯೂ ಹೆಚ್ಚಾಗಲಿದೆ. ಈ ಹೊರೆಗಳ ನಿರ್ವಹಣೆಗೆ ಸಾಲದ ಮೇಲಿನ ಅವಲಂಬನೆ ಅನಿವಾರ್ಯ ಎಂಬುದನ್ನು ಆರ್ಥಿಕ ಇಲಾಖೆಯು ಸದನದಲ್ಲಿ ಮಂಡಿಸಿದ ‘ಮಧ್ಯಮಾವಧಿ ವಿತ್ತೀಯ ಯೋಜನೆ 2025–29’ರ ಮುನ್ನಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕಾರಣದಿಂದಲೇ 2027–28ಕ್ಕೆ (2028ರ ಮಾರ್ಚ್ ಅಂತ್ಯ) ಒಟ್ಟು ಸಾಲ ₹9.25 ಲಕ್ಷ ಕೋಟಿ, 2028–29ಕ್ಕೆ (2029ರ ಮಾರ್ಚ್ ಅಂತ್ಯ) ಒಟ್ಟು ಸಾಲ ₹10.17 ಲಕ್ಷ ಕೋಟಿಗೆ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

ಹೀಗಿದ್ದೂ ರಾಜ್ಯದ ಒಟ್ಟು ಉತ್ಪಾದನೆಯ (ಜಿಎಸ್ಡಿಪಿ) ಹೋಲಿಕೆಯಲ್ಲಿ ಸಾಲದ ಪ್ರಮಾಣವನ್ನು ಕಡಿಮೆ ಮಾಡುವತ್ತ ಮುನ್ನಂದಾಜಿನಲ್ಲಿ ಸರ್ಕಾರ ಗಮನ ಹರಿಸಿದೆ. ಇದನ್ನು ಸಾಧಿಸಲು, ಕೇಂದ್ರದ ತೆರಿಗೆ ಆದಾಯದಲ್ಲಿನ ಪಾಲಿನ ಹೆಚ್ಚಳ ಮತ್ತು ಜಿಎಸ್ಟಿ ಪರಿಹಾರ ಸೆಸ್ ರದ್ದಾಗಿ, ಅದು ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಲಭ್ಯವಾಗುತ್ತದೆ ಎಂದು ಸರ್ಕಾರ ನಿರೀಕ್ಷಿಸಿದೆ.

ಆದರೆ ಈ ನಿರೀಕ್ಷೆಗಳು ಈಡೇರುವ ಸಾಧ್ಯತೆಗಳು ತೀರಾ ತೆಳುವಾಗಿವೆ. ‘16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನಿಗದಿ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಕೇಂದ್ರದಿಂದ ಸ್ವೀಕೃತವಾಗುವ ರಾಜಸ್ವವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಬಹುದು’ ಎಂದು ಮುನ್ನಂದಾಜಿನಲ್ಲಿ ಆರ್ಥಿಕ ಇಲಾಖೆ ಹೇಳಿದೆ.

‘ಈ ನಿರೀಕ್ಷೆ ಈಡೇರಲಾರದು. ಏಕೆಂದರೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರವು ತನ್ನ ಒಟ್ಟು ತೆರಿಗೆ ಆದಾಯದಲ್ಲಿ ಶೇ 41ರಷ್ಟನ್ನು ಮಾತ್ರ ರಾಜ್ಯಗಳ ಜತೆಗೆ ಹಂಚಿಕೊಳ್ಳುತ್ತಿದೆ. ಇದನ್ನು ಶೇ 40ಕ್ಕೆ ಇಳಿಸಿ, ಶಿಫಾರಸು ಮಾಡಿ ಎಂದು 16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರವು ಸೂಚಿಸಿ ಪತ್ರ ಬರೆದಿದೆ. ಇದು ಅನುಷ್ಠಾನಕ್ಕೆ ಬಂದಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಇನ್ನಷ್ಟು ಕಡಿಮೆಯಾಗಲಿದೆ’ ಎನ್ನುತ್ತಾರೆ ಆರ್ಥಿಕ ಇಲಾಖೆಯ ಅಧಿಕಾರಿಗಳು.

‘ಕೇಂದ್ರದಿಂದ ಬರುವ ಪಾಲಿನ ಪ್ರಮಾಣ ಕಡಿಮೆಯಾದರೆ, ವಿತ್ತೀಯ ಕೊರತೆಯೂ ಹೆಚ್ಚಲಿದೆ. ಪರಿಣಾಮವಾಗಿ ಸಾಲದ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಇದನ್ನು ಸ್ವಲ್ಪವಾದರೂ ನಿಯಂತ್ರಿಸುವ ಏಕೈಕ ಹಾದಿಯೆಂದರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು. ಆದರೆ, ಆ ಸಾಧ್ಯತೆಗಳು ಕಡಿಮೆ’ ಎಂಬುದು ಅಧಿಕಾರಿಗಳ ಅಂದಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.