ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಸಾವಿರ ನೋಟು ಚಲಾವಣೆಗೆ ಬ್ರೇಕ್‌: ಪ್ರಮುಖ ಅಂಶಗಳು

Published 20 ಮೇ 2023, 5:19 IST
Last Updated 20 ಮೇ 2023, 5:19 IST
ಅಕ್ಷರ ಗಾತ್ರ

* ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಘೋಷಿಸಿದೆ.

* ಮೇ 23ರಿಂದ ನೋಟು ಬದಲಿಸಿಕೊಳ್ಳಲು ಅವಕಾಶ. ಬ್ಯಾಂಕ್‌ ಶಾಖೆಗಳಲ್ಲದೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ನೋಟು ಬದಲಾಯಿಸಿಕೊಳ್ಳಬಹುದು

* ತಕ್ಷಣದಿಂದ ಜಾರಿಗೆ ಬರುವಂತೆ ₹2 ಸಾವಿರದ ನೋಟು ವಿತರಣೆ ನಿಲ್ಲಿಸಲು ಬ್ಯಾಂಕ್‌ಗಳಿಗೆ ಸೂಚನೆ

* 2016ರ ನವೆಂಬರ್‌ನಲ್ಲಿ ₹2 ಸಾವಿರದ ನೋಟು ಪರಿಚಯಿಸಲಾಯಿತು

* 2018-19ರಲ್ಲಿ ಮುದ್ರಣ ನಿಲ್ಲಿಸಲಾಯಿತು

* ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್‌ 30ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ.

* ₹2 ಸಾವಿರ ಮುಖಬೆಲೆಯ ನೋಟುಗಳನ್ನು ಬೇರೆ ಮುಖಬೆಲೆಯ ನೋಟುಗಳೊಂದಿಗೆ ಒಂದು ಬಾರಿಗೆ ₹20 ಸಾವಿರದವರೆಗೆ ಮಾತ್ರವೇ ಬದಲಾಯಿಸಿಕೊಳ್ಳಬಹುದು ಎನ್ನುವ ಮಿತಿಯನ್ನು ಆರ್‌ಬಿಐ ವಿಧಿಸಿದೆ. ಬ್ಯಾಂಕ್‌ ಶಾಖೆಗಳ ದೈನಂದಿನ ಕೆಲಸಗಳಿಗೆ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ಈ ಮಿತಿಯನ್ನು ಹೇರಲಾಗಿದೆ.

* ಬ್ಯಾಂಕ್‌ ಖಾತೆಗಳಿಗೆ ಗ್ರಾಹಕರು ಹಣ ಜಮಾ ಮಾಡುವ ರೀತಿಯಲ್ಲಿಯೇ ₹2 ಸಾವಿರದ ನೋಟುಗಳನ್ನು ಸಹ ಯಾವುದೇ ನಿರ್ಬಂಧ ಇಲ್ಲದೇ ಠೇವಣಿ ಇಡಬಹುದು. ಆದರೆ ಇದು ಶಾಸನಬದ್ಧ ನಿಬಂಧನೆಗಳಿಗೆ ಒಳಪಟ್ಟಿರಲಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT