ಶಿವಮೊಗ್ಗ: ತಾಂತ್ರಿಕ ಸಮಸ್ಯೆಯ ಕಾರಣ ಗ್ರಾಮೀಣ ಪ್ರದೇಶಗಳ ಜಮೀನು, ನಿವೇಶನಗಳ ನೋಂದಣಿ ಪ್ರಕ್ರಿಯೆಗೆ ಅಡಚಣೆಯಾಗಿದೆ.

ನೋಂದಣಿ ಸಾಫ್ಟ್ವೇರ್ ‘ಕಾವೇರಿ’ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿನ ಇ–ಸ್ವತ್ತು ಮಧ್ಯೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾದ ಯಾವ ದಾಖಲೆ ಗಳೂ ಆಯಾ ಗ್ರಾಮ ಪಂಚಾಯಿತಿ ಗಳನ್ನು ತಲುಪುತ್ತಿಲ್ಲ. ಒಂದು ತಿಂಗಳಿನಿಂದ ಇಂತಹ ಸಮಸ್ಯೆ ಕಾಣಿಸಿಕೊಂಡಿದೆ.

ತಾಂತ್ರಿಕ ಸಮಸ್ಯೆಯ ಪೂರ್ವ ಮಾಹಿತಿಇಲ್ಲದೇ ಇರುವುದು. ಯಾವಾಗ ನೋಂದಣಿ ಆರಂಭ ವಾಗುತ್ತದೆ ಎನ್ನುವ ನಿಖರ ಮಾಹಿತಿದೊರೆಯದ ಕಾರಣ ಜನರು ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ.

ಕಾವೇರಿ ಹಾಗೂ ಭೂಮಿ ಸಾಫ್ಟ್ವೇರ್ ಮಧ್ಯೆ ಸುಗಮ ನಿರ್ವಹಣೆ ಇದೆ. ಹಾಗಾಗಿ, ನಗರವ್ಯಾಪ್ತಿಯ ಭೂಮಿಗಳ ನೋಂದಣಿಗೆ ಯಾವುದೇ ಸಮಸ್ಯೆ ಇಲ್ಲ.

ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ ನಂತರ ಗ್ರಾಮ ಪಂಚಾಯಿತಿಗೆ ನೋಂದಣಿ ಪ್ರಕ್ರಿಯೆಯ ದತ್ತಾಂಶ ಕಳುಹಿಸಿ ಕೊಡಲಾಗುತ್ತದೆ. ಆದರೆ, ತಾಂತ್ರಿಕ ಸಮಸ್ಯೆಕಾರಣ ಗ್ರಾಮ ಪಂಚಾಯಿ ತಿಗಳಿಗೆ ನೋಂದಣಿ ದತ್ತಾಂಶ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದ ರಿಂದ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ.

ವಾರದಲ್ಲಿ ಸಮಸ್ಯೆ ಪರಿಹಾರ: ತಾಂತ್ರಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾರದಲ್ಲಿ ಈ ಸಮಸ್ಯೆ ಬಗೆಹರಿಯಲಿದೆಎನ್ನುತ್ತಾರೆಹಿರಿಯ ಉಪ ನೋಂದಣಾಧಿಕಾರಿ ಎಚ್.ಜೆ.ನಾಗರಾಜ್.

‘ಆಸ್ತಿ ನೋಂದಣಿಗೆ ಸಂಬಂಧಿಸಿ ದಂತೆ ರಾಜ್ಯದಲ್ಲಿ ಗಂಭೀರವಾದ ತಾಂತ್ರಿಕ ಸಮಸ್ಯೆಗಳೇನೂ ಇಲ್ಲ. ಕೆಲವೊಮ್ಮೆ ಸ್ಥಳೀಯವಾಗಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದುಂಟು. ಅವುಗಳನ್ನು ತಕ್ಷಣವೇ ಸರಿಪಡಿಸು ತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ನೋಂದಣಿ ಮತ್ತು ಮುದ್ರಾಂಕ ಆಯುಕ್ತ ಕೆ.ಪಿ.ಮೋಹನ್ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆನ್ಲೈನ್ ನೋಂದಣಿ ಜಾರಿಯಾಗಲಿ

ಉಪನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ಗಳು ಎಜೆನ್ಸಿ ಮೂಲದವರಾಗಿದ್ದಾರೆ.ಆಗಾಗ್ಗೆ ನಾನಾ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಸಾರ್ವಜನಿಕರು ನೋಂದಣಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಆನ್ಲೈನ್ ನೋಂದಣಿ ಪ್ರಕ್ರಿಯೆ ಜಾರಿಗೆ ತಂದರೆ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ.

– ಅಶೋಕ್ ಯಾದವ್,ಪ್ರಧಾನ ಕಾರ್ಯದರ್ಶಿ, ನಾಗರಿಕ ಹಿತರಕ್ಷಣಾ ವೇದಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.