ನವದೆಹಲಿ: ಬೆಂಗಳೂರು ಅರಮನೆ ಮೈದಾನದ 15 ಎಕರೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ನೀಡುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.

ಆರಂಭದಲ್ಲಿ, ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠವು ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ‘ಮತ್ತೊಂದು ಪೀಠವು ನೀಡಿರುವ ತೀರ್ಪನ್ನು ನಾವು ಮರು ಪರಿಶೀಲನೆ ನಡೆಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿತು.

ರಾಜವಂಶಸ್ಥರಿಗೆ ₹3400 ಕೋಟಿ ಟಿಡಿಆರ್ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಅರವಿಂದ ಕುಮಾರ್ ಪೀಠವು ಮೇ 22ರಂದು ತೀರ್ಪು ನೀಡಿತ್ತು.

‘ಬೆಂಗಳೂರು ಅರಮನೆ (ಸ್ವಾಧೀನ ಹಾಗೂ ವರ್ಗಾವಣೆ) ಕಾಯ್ದೆಯಡಿ ಅರಮನೆ ಜಾಗವನ್ನು 1996ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ 2004ರಲ್ಲಿ ತಿದ್ದುಪಡಿ ತಂದು ಟಿಡಿಆರ್ ಪರಿಚಯಿಸಲಾಯಿತು. ಹೀಗಾಗಿ, ಮೊದಲೇ ಸ್ವಾಧೀನಪಡಿಸಿಕೊಂಡ ಭೂಮಿಗೆ ಟಿಡಿಆರ್ ಅನ್ವಯ ಆಗುವುದಿಲ್ಲ’ ಎಂದು ಸಿಬಲ್ ವಾದಿಸಿದರು.

‘ಟಿಡಿಆರ್ ನಿಯಮ ಜಾರಿಗೆ ಬರುವ ಮೊದಲೇ 15 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಮೂಲ ಕಾಯ್ದೆಯಡಿ ಭೂ ಸಂತ್ರಸ್ತರಿಗೆ ಪರಿಹಾರವನ್ನು ಇತ್ಯರ್ಥಪಡಿಸಲಾಗಿದೆ’ ಎಂದರು.

‘15 ಎಕರೆಯನ್ನು 1996ರ ಕಾನೂನಿನಡಿ ಸ್ವಾಧೀನಪಡಿಸಿಕೊಂಡು ₹11 ಕೋಟಿ ಪರಿಹಾರ ನಿಗದಿಪಡಿಸಲಾಗಿತ್ತು. ಆ ಸಮಯದಲ್ಲಿ ಟಿಡಿಆರ್ ಪರಿಕಲ್ಪನೆಯೇ ಇರಲಿಲ್ಲ. ಟಿಡಿಆರ್ ಅನ್ನು ಅನುಮತಿಸುವ ಸೆಕ್ಷನ್ 14 ಬಿ ಅನ್ನು 2004ರಲ್ಲಿ ಮಾತ್ರ ಪರಿಚಯಿಸಲಾಯಿತು. ಭೂಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಜಮೀನು ಬಿಟ್ಟುಕೊಟ್ಟರೆ ಟಿಡಿಆರ್ ನೀಡಬಹುದು’ ಎಂದು ಅವರು ಸ್ಪಷ್ಟಪಡಿಸಿದರು.

1996ರ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ರಾಜಮನೆತನವು 1997ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ಇನ್ನೂ ಮುಗಿದಿಲ್ಲ.

‘ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತೀರ್ಪು ನೀಡಿದೆ. ಆದರೆ, ಸೆಕ್ಷನ್ 14 ಬಿ ಅಡಿಯಲ್ಲಿ ತಾವು ಎತ್ತಿರುವ ಕಾನೂನು ಆಕ್ಷೇಪಣೆಗಳಿಗೆ ತೀರ್ಪಿನಲ್ಲಿ ಉತ್ತರ ಸಿಕ್ಕಿಲ್ಲ’ ಎಂದು ಸಿಬಲ್ ವಾದಿಸಿದರು. ‘ನೀವು ಅಂತಿಮ ತೀರ್ಪನ್ನು ತಿದ್ದುಪಡಿ ಮಾಡಲು ಅಥವಾ ನ್ಯಾಯಾಂಗ ನಿಂದನೆ ಪ್ರಕ್ರಿಯೆಯ ಮೂಲಕ ಹೊಸ ಹಕ್ಕುಗಳನ್ನು ಪರಿಚಯಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.