ಹುಬ್ಬಳ್ಳಿ: ‘ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಇರುವ ಮಾಹಿತಿ ಪರಿಷ್ಕರಣೆ ಮಾಡಿದ್ದ ಸಾಲು ನೋಡಿ ಎದೆಗೆ ಕಲ್ಲು ಹೊಡೆದ ಹಾಗಾಯಿತು’ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂಥ ಕೆಲಸ ನಡೆಯುತ್ತಿದೆ. ಸೈದ್ಧಾಂತಿಕ ವಿಚಾರಕ್ಕೆ ಯಾರೂ ಕೈ ಹಾಕಬೇಡಿ. ಅವರ ಸಂದೇಶಗಳನ್ನು ಮಕ್ಕಳಿಗೆ ನೀಡುವಂತಾಗಬೇಕು. ಅದನ್ನು ಬಿಟ್ಟು ಬಸವಣ್ಣನವರ ಮೂಲ ಉದ್ದೇಶವನ್ನೇ ದಾರಿ ತಪ್ಪಿಸುವಂತಾಗಬಾರದು’ಎಂದು ಅಭಿಪ್ರಾಯ ಪಟ್ಟರು.

‘ಅಸಮಾನತೆ ವಿರುದ್ದ ಬಸವಣ್ಣನವರು ಮನೆಯನ್ನು ಬಿಟ್ಟರು. ಅದು ಜಗಜ್ಜಾಹಿರು. ಆದರೆ, ಪಠ್ಯಪುಸ್ತಕದಲ್ಲಿ ಸೇರಿಸಿದ್ದೇನು?
ಅದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ತಂದೆಯವರು ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗುವ ಮೊದಲು ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ-ಸಿದ್ದಾಂತಕ್ಕೆ ಧಕ್ಕೆ ತಂದರೆ ನಾವು ಸಹಿಸಲ್ಲ’ಎಂದು ಎಚ್ಚರಿಕೆ ನೀಡಿದರು.

ಓದಿ...ಪಠ್ಯ ಪರಿಷ್ಕರಣೆಗೆ ವಿರೋಧ: ಸಿಎಂ ಬಸವರಾಜ ಬೊಮ್ಮಾಯಿಗೆ ಸಾಣೇಹಳ್ಳಿ ಶ್ರೀ ಪತ್ರ

‘ಬೊಮ್ಮಾಯಿ ಅವರೇ, ಬಸವಣ್ಣನವರ ತತ್ವ-ಸಿದ್ದಾಂತಗಳನ್ನು ಜಗತ್ತಿಗೆ ತಿಳಿಸಿ. ನಿಮ್ಮ ತಂದೆಯವರು ಹೇಗೆ ಬದುಕಿದ್ದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿ. ನೀವು ಮೌನ ವಹಿಸಿದರೆ ಬಸವ ಭಕ್ತರಿಗೆ ನೋವಾಗುತ್ತದೆ’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.