ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಠ್ಯ ವಾಪಸ್‌ಗೆ ಎಐಡಿಎಸ್‌ಒ ಒತ್ತಾಯ

Last Updated 10 ಜೂನ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮವಾಗಿ ನೇಮಕಗೊಂಡ ಮತ್ತು ನ್ಯಾಯಸಮ್ಮತವಲ್ಲದ ಸಮಿತಿಯು ಮರುಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ವಾಪಸ್‌ ಪಡೆಯಬೇಕು’ ಎಂದು ಎಐಡಿಎಸ್‌ಒ ಒತ್ತಾಯಿಸಿದೆ.

‘ರಾಜ್ಯ ಸರ್ಕಾರವು ಪಠ್ಯಪುಸ್ತಕಗಳನ್ನು ಮರುಪರಿಷ್ಕರಿಸಲು ನಿಯೋಜಿಸಿದ್ದ ಸಮಿತಿಯೇ ಕಾನೂನುಬಾಹಿರವಾಗಿದೆ. ಸರ್ಕಾರಿ ಆದೇಶವಿಲ್ಲದೆಯೇ, ಕೇವಲ ಶಿಕ್ಷಣ ಸಚಿವರ ಮಾತಿನ ಮೇಲೆ ರಚಿಸಲಾಗಿದೆ. ಈ ಸಮಿತಿಯು ಮರುಪರಿಷ್ಕರಿಸಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಕ್ರಮ ಖಂಡನೀಯ’ ಎಂದು ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಜಾತಾಂತ್ರಿಕ ಪ್ರಕ್ರಿಯೆ ಹಾಗೂ ಕನಿಷ್ಠ ಸರ್ಕಾರಿ ನಿಯಮಗಳಿಗೆ ಒಳಪಡದ ಸಮಿತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಯಾವ ನೈತಿಕತೆಯನ್ನೂ ರಾಜ್ಯ ಸರ್ಕಾರವು ಹೊಂದಿಲ್ಲ. ಹಳೆಯ ಸಮಿತಿ ಪ್ರಕಟಿಸಿದ ಪುಸ್ತಕಗಳನ್ನೇ ಈ ವರ್ಷವೂ ಮುಂದುವರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT