ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಮೆಕ್ಯಾನಿಕ್ ಸೂರಜ್ ನಾರೆ ಅವರು ನೆಚ್ಚಿನ ಕಾರನ್ನು ತಮ್ಮ ಮೂರು ಅಂತಸ್ತಿನ ಮನೆಯ ತಾರಸಿ ಮೇಲೆ ಇಟ್ಟಿದ್ದಾರೆ. ಕ್ರೇನ್ ನೆರವಿನಿಂದ ಮೇಲೆ ಇಡಲಾಗಿರುವ ಕಾರು ಸುಲಭವಾಗಿ ಕಾಣುವಂತೆ ಇಳಿಜಾರಿನಲ್ಲಿ ಇರಿಸಲಾಗಿದೆ.

ಬೇಡಕಿಹಾಳದ ಕಡುಬಡ ಕುಟುಂಬದಲ್ಲಿ ಜನಿಸಿದ ಸೂರಜ್ ಐಟಿಐ ಓದಿ, ಮಹಾರಾಷ್ಟ್ರದ ಪುಣೆಯಲ್ಲಿ ಗ್ಯಾರೇಜ್ನಲ್ಲಿ ಮೆಕ್ಯಾನಿಕ್ ಆಗಿ 4 ವರ್ಷ ದುಡಿದರು. 12 ವರ್ಷಗಳ ಹಿಂದೆ ಸ್ವಗ್ರಾಮಕ್ಕೆ ಬಂದು, ತಮ್ಮದೇ ಚಿಕ್ಕ ಗ್ಯಾರೇಜ್ ತೆರೆದರು. ಜೊತೆಗೆ ಕಾರು ಚಾಲನಾ ತರಬೇತಿ ಕೇಂದ್ರ ಆರಂಭಿಸಿದರು. ಕೆಂಪು ಬಣ್ಣದ ಕಾರು ಖರೀದಿಸಿ ಚಾಲನಾ ತರಬೇತಿ ನೀಡಲು ಶುರು ಮಾಡಿದರು. ವರ್ಷದಿಂದ ವರ್ಷಕ್ಕೆ ಅವರು ಆರ್ಥಿಕವಾಗಿ ಸಬಲರಾದರು. ಸದ್ಯ ಅವರ ಬಳಿ ಐದು ಕಾರುಗಳಿವೆ. ಮೂರು ಅಂತಸ್ತಿನ ಸ್ವಂತ ಮನೆಯನ್ನೂ ಕಟ್ಟಿಸಿಕೊಂಡಿದ್ದಾರೆ.

‘ನಮ್ಮ ಪಾಲಿಗೆ ದೇವರು ಆಗಿರುವ ಈ ಕಾರು ನಮ್ಮ ಕುಟುಂಬವನ್ನು ಸಲಹಿ, ಸುಸ್ಥಿತಿಗೆ ಬರುವಂತೆ ಮಾಡಿದೆ. ಅದಕ್ಕೆ ಅಭಿಮಾನದಿಂದ ಮನೆಯ ಮೇಲೆ ಇರಿಸಿದ್ದೇನೆ. ಸುಸ್ಥಿತಿಯಲ್ಲಿದ್ದ ಕಾರನ್ನೇ 2022ರ ಜನವರಿಯಲ್ಲಿ ಮನೆಯ ತಾರಸಿ ಮೇಲೆ ಇರಿಸಿದೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಹಬ್ಬದ ಸಂದರ್ಭದಲ್ಲಿ ಕಾರನ್ನು ಪೂಜಿಸುತ್ತೇನೆ’ ಎಂದು ಸೂರಜ್ ನಾರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಭಾಗದ ಚಕ್ರಗಳು ಹೊರಗೆ ಕಾಣುವಂತೆ, ಕೆಳಕ್ಕೆ ಮುಖ ಮಾಡಿ ಕಾರನ್ನು ನಿಲ್ಲಿಸಿರುವೆ. ಅದು ಬೀಳುವಂತೆ ಕಾಣುತ್ತದೆ. ನಮ್ಮ ಮನೆಯೂ ಈಗ ಸೆಲ್ಫಿ ಸ್ಪಾಟ್ ಆಗಿದೆ. ಊರಿಗೆ ಬಂದವರು ತಾರಸಿ ಮೇಲಿನ ಕಾರನ್ನೊಮ್ಮೆ ನೋಡಿಕೊಂಡೇ ಹೋಗುವುದು ರೂಢಿಯಾಗಿದೆ’ ಎಂದು ಅವರು ತಿಳಿಸಿದರು.

ನಮ್ಮದು ಬಡ ಕುಟುಂಬ. ಸರಿಯಾಗಿ ಊಟ ಬಟ್ಟೆಯೂ ಇಲ್ಲದ ಸ್ಥಿತಿ ಇತ್ತು. ಈ ಕೆಂಪು ಕಾರು ಖರೀದಿಸಿದ ಬಳಿಕ ನಾನು ಸಾಕಷ್ಟು ದುಡಿದೆ ಗಳಿಸಿದೆ. ಈ ಕಾರೇ ನನ್ನ ದೇವರು
-ಸೂರಜ್ ನಾರೆ, ಮೆಕ್ಯಾನಿಕ್

ದುಡಿಮೆಯೇ ದೇವರು ಎನ್ನುವುದು ನಮ್ಮ ಭಾವನೆ. ನಾವೂ ವಾಹನವನ್ನು ಪೂಜಿಸುತ್ತೇವೆ. ಆದರೆ ನಾರೆ ಕುಟುಂಬದವರು ಕಾರಿಗೇ ದೇವರ ರೂಪ ಕೊಟ್ಟಿದ್ದಾರೆ
-ಎಂ.ಆರ್.ಮುನ್ನೋಳಿಕರ, ಬೇಡಕಿಹಾಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.