ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಿದೆ ಜಾತಿಯ ಕರಿನೆರಳು -ವೀರಪ್ಪ ಮೊಯಿಲಿ

Last Updated 24 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿಯ ಕರಿ ನೆರಳು ನನ್ನನ್ನು ಈಗಲೂ ಕಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಕಳವಳ ವ್ಯಕ್ತಪಡಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ವಿಜಯಾ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರೊ.ತುಮ್ಮಲ ರಾಮಕೃಷ್ಣ ಅವರ ಕಥೆಗಳ ಆಧಾರಿತ ಎಂ.ಎನ್. ವೆಂಕಟೇಶ್ ಅವರ ನ-ಕುಲ ನಾಟಕದ ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.

‘ತಳ ಸಮುದಾಯದಿಂದ ಬಂದ ನಾನು ಅನೇಕ ಸಮಸ್ಯೆಗಳನ್ನು ಜಾತಿಯ ವಿಷಯದಲ್ಲಿ ಅನುಭವಿಸುತ್ತಾ ಬಂದೆ. ಆದರೆ, ಮುಖ್ಯಮಂತ್ರಿ ಆದಾಗಲೂ ಜಾತಿಯ ಸಮಸ್ಯೆ ನನ್ನನ್ನು ಕಾಡಿದ್ದು ನಿಜ’ ಎಂದು ಹೇಳಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಕನ್ನಡ ಮತ್ತು ತೆಲುಗು ಸಹೋದರ ಭಾಷೆಗಳು. ಯಾವಾಗಲೂ ಎಲ್ಲಾ ವಿಷಯದಲ್ಲೂ ಸಹೋದರರಾಗಿಯೇ ಉಳಿದುಕೊಂಡಿದ್ದೇವೆ. ಈ ನಾಟಕ ಕ್ಷೌರಿಕ ಸಮಾಜದ ಸಮಸ್ಯೆಗಳನ್ನು ಬಿಚ್ಚುಡುವಲ್ಲಿ ಯಶಸ್ವಿಯಾಗಿದೆ. ಪ್ರತಿ ಹಿಂದುಳಿದ ವರ್ಗದ ಕೈಗನ್ನಡಿಯಂತಿದೆ’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ‘ಜಾತಿಯ ಕಾರಣಕ್ಕೆ ಅನೇಕ ಪ್ರತಿಭೆಗಳು ನಶಿಸಿಹೋಗುತ್ತವೆ. ವಿದ್ಯೆಯಿಂದ ನಿಜವಾದ ಪ್ರತಿಭೆಗಳು ಹೊರಹೊಮ್ಮುವಂತೆ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT