ಬೆಂಗಳೂರು: ಲಕ್ಷಗಳ ಲೆಕ್ಕದಲ್ಲಿ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಶ್ರೇಣಿಯ ವೇತನ ಪಡೆಯುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹಲವು ಪ್ರಾಧ್ಯಾಪಕರು, ಕಡಿಮೆ ಸಂಬಳದ ಬೋಧಕೇತರ ಹುದ್ದೆಗಳಲ್ಲೇ ಸೇವಾವಧಿ ಪೂರ್ಣಗೊಳಿಸುತ್ತಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ನಿರ್ದೇಶಕರ ಕಚೇರಿ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗಳು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್), ಶಿಕ್ಷಣ ನೀತಿ ವಿಭಾಗ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತುಗಳಲ್ಲಿ ಆಡಳಿತಾಧಿಕಾರಿ, ನೋಡಲ್ ಅಧಿಕಾರಿ, ವಿಶೇಷಕರ್ತವ್ಯಾಧಿಕಾರಿ, ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಪ್ರಾಧಿಕಾರಗಳ ವ್ಯವಸ್ಥಾಪಕ ನಿರ್ದೇಶಕರು, ಆಯುಕ್ತರ ಹುದ್ದೆಗಳಿಗೂ ನಿಯೋಜನೆಗೊಂಡಿದ್ದಾರೆ.
ನೇಮಕಾತಿ ವಿಭಾಗ, ದಾಖಲೆಗಳ ಪರಿಶೀಲನಾ ವಿಭಾಗಗಳಲ್ಲೂ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರಿಗೆ ಮೀಸಲಾದ ಶ್ರೇಣಿಯ ಹುದ್ದೆಗಳಿಗೂ ನಿಯೋಜನೆ ಪಡೆದಿದ್ದಾರೆ.

1996ನೇ ಬ್ಯಾಚ್ ಸೇರಿದಂತೆ ಇದುವರೆಗೂ ನೇಮಕವಾದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ನಿಯೋಜನೆಯ ಸೌಲಭ್ಯ ಬಳಸಿಕೊಂಡಿದ್ದಾರೆ. 2024ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡವರೂ ನಿಯೋಜನೆ ಮೇಲೆ ತೆರಳಿದ್ದಾರೆ. ಕೆಲವರು ಎರಡು ದಶಕಕ್ಕೂ ಹೆಚ್ಚು ಸಮಯ ನಿಯೋಜನೆಗೊಂಡ ಬೋಧಕೇತರ ಹುದ್ದೆಗಳಲ್ಲೇ ಪೂರ್ಣ ಸಮಯ ಕಳೆದಿದ್ದಾರೆ.

ಹೈಕೋರ್ಟ್ ಆದೇಶಕ್ಕೂ ಇಲ್ಲ ಮನ್ನಣೆ

ಯುಜಿಸಿ ವೇತನ ಶ್ರೇಣಿ ಪಡೆಯುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರು, ಪ್ರಾಂಶುಪಾಲರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡಬಾರದು. ಇದು ಯುಜಿಸಿ ನಿಯಮಗಳಿಗೆ ವಿರುದ್ಧ. ನಿಯೋಜನೆ ಮಾಡುವುದು ಸಾರ್ವಜನಿಕ ಹಣದ ದುರುಪಯೋಗವೂ ಆಗುತ್ತದೆ. ಹಾಗಾಗಿ, ನಿಯೋಜನೆ ರದ್ದು ಮಾಡಬೇಕು ಎಂದು ವಸಂತರಾಜು ಶೆಟ್ಟಿ ವರ್ಸಸ್ ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಜುಲೈ 2011ರಲ್ಲಿ ಆದೇಶ ನೀಡಿತ್ತು. ಆದೇಶ ನೀಡಿದ ನಂತರವೂ ಕೆಲವರು ನಿಯೋಜನೆಗೊಂಡ ಹುದ್ದೆಗಳಲ್ಲೇ ಇಂದಿಗೂ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿದು ನಿಯೋಜನೆಗಳು ನಡೆಯುತ್ತಲೇ ಇವೆ.

‘ಕೆಲ ಪ್ರಾಧ್ಯಾಪಕರು ಐಎಎಸ್ ಅಧಿಕಾರಿಗಳಿಗಿಂತ ಅಧಿಕ ವೇತನ ಪಡೆಯುತ್ತಾರೆ. ಒಂದು ದಿನವೂ ತರಗತಿಗಳಿಗೆ ತೆರಳಿ ಪಾಠ ಮಾಡಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಬೋಧಕೇತರ ಹುದ್ದೆಗಳಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿ ಅನ್ವಯವಾಗುತ್ತದೆ. ಬೋಧಕೇತರ ಹುದ್ದೆಗಳಿಗೆ ನಿಯೋಜನೆಗೊಂಡವರಿಗೆ
ಯುಜಿಸಿ ವೇತನ ಶ್ರೇಣಿ ಸ್ಥಗಿತಗೊಳಿಸಬೇಕು. ರಾಜ್ಯ ವೇತನ ಶ್ರೇಣಿ ನೀಡಬೇಕು. ಅವರ ವೇತನದಿಂದಲೇ ಅವರ ಬದಲು ಪಾಠ ಮಾಡುವ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡಬೇಕು’ ಎಂದು ಒತ್ತಾಯಿಸಿ ಅಧ್ಯಾಪಕರ ಒಂದು ವರ್ಗ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿದೆ.

ಪಾಠ ಮಾಡದಿದ್ದರೂ ಪ್ರೊಫೆಸರ್

ತರಗತಿಗಳಲ್ಲಿ ಪಾಠ ಮಾಡದೆ ಬೋಧಕೇತರ ಹುದ್ದೆಗಳಲ್ಲೇ ಸೇವಾವಧಿ ಮುಗಿಸಿದ ಅಧ್ಯಾಪಕರಿಗೂ ಕಾಲಕಾಲಕ್ಕೆ ಬಡ್ತಿ, ವೇತನ ಸೌಲಭ್ಯ ನೀಡಲಾಗಿದೆ. ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದ ಕೆಲವರು ಒಂದು ದಿನವೂ ಪಾಠ ಮಾಡಿಲ್ಲ. ಹಾಗಿದ್ದರೂ, ಈಗ ‘ಪ್ರೊಫೆಸರ್’ ಎನಿಸಿಕೊಂಡಿದ್ದಾರೆ. 2024ರಲ್ಲಿ ನೇಮಕಾತಿ ಆದೇಶ ಪಡೆದ ಕೆಲ ಸಹಾಯಕ ಪ್ರಾಧ್ಯಾಪಕರು ಇನ್ನೂ ಪ್ರೊಬೇಷನರಿ ಅವಧಿ ಮುಗಿಸಿಲ್ಲ. ಅಂಥವರನ್ನೂ ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಸಲಹಾ ಸಮಿತಿಗೆ ಸಹಾಯಕ ಪ್ರಾಧ್ಯಾಪಕರು

ಯುಜಿಸಿ ನಿಯಮ, ಮಾರ್ಗಸೂಚಿಗಳನ್ನು ಪರಾಮರ್ಶಿಸಿ, ಅಭಿಪ್ರಾಯ ನೀಡಲು ಕಾಲೇಜು ಶಿಕ್ಷಣ ಇಲಾಖೆ ರಚಿಸಿರುವ ಸಲಹಾ ಸಮಿತಿಗೆ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ. ಇಂತಹ ಸಮಿತಿಗಳಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳು, ಅನುಭವಿ ಪ್ರಾಧ್ಯಾಪಕರು, ವಿಷಯ ತಜ್ಞರು, ಯುಜಿಸಿ ನಾಮ ನಿರ್ದೇಶಿತ ಸದಸ್ಯರು ಇರಬೇಕು. ಆದರೆ, 2009, 2017ರಲ್ಲಿ ನೇಮಕವಾದ ಸಹಾಯಕ ಪ್ರಾಧ್ಯಾಪಕರನ್ನು ಸಮಿತಿಗೆ ನೇಮಿಸಲಾಗಿದೆ.

ಬೋಧಕೇತರರ ರಜೆ ಸೌಲಭ್ಯ!

ಯುಜಿಸಿ ಶ್ರೇಣಿಯ ವೇತನ ಪಡೆದು ಬೋಧಕೇತರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ಬೋಧಕೇತರರಿಗೆ ನೀಡುವ 30 ಗಳಿಕೆ ರಜೆ (ಇ.ಎಲ್) 10 ಅರ್ಧ ದಿನದ ರಜೆಯ ಸೌಲಭ್ಯ ಪಡೆದಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ಈ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಬೋಧಕ ಸಿಬ್ಬಂದಿಗೆ ದಸರಾ ರಜೆಯ ಸೌಲಭ್ಯ ಇರುವ ಕಾರಣ ಅವರಿಗೆ ಗಳಿಕೆ ರಜೆ, ಅರ್ಧ ದಿನದ ರಜೆಯ ಸೌಲಭ್ಯ ಇರುವುದಿಲ್ಲ. ಬೋಧಕೇತರಿಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

ಸರ್ಕಾರ ಅಗತ್ಯವಿರುವ ಬೋಧಕೇತರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ವರ್ಗದ ನಿಯೋಜನೆಗಳನ್ನು ರದ್ದು ಮಾಡಬೇಕು

–ಅರುಣ್ ಶಹಾಪುರ್, ವಿಧಾನಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.