ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇಂದಿನಿಂದ 'ಟೀನ್ ಇಂಡೀ ಫಿಲ್ಮ್ ಅವಾರ್ಡ್ಸ್‌’ ಚಿತ್ರೋತ್ಸವ

ವಿದ್ಯಾರ್ಥಿಗಳೇ ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳ ಪ್ರದರ್ಶನ
Published 14 ಮಾರ್ಚ್ 2024, 0:28 IST
Last Updated 14 ಮಾರ್ಚ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌ವಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಪ್ರತಿಷ್ಠಿತ ಟೀನ್ ಇಂಡೀ ಫಿಲ್ಮ್ ಅವಾರ್ಡ್ಸ್‌ನ (ಟಿಐಎಫ್‌ಎ) ಮೂರನೇ ಆವೃತ್ತಿ ಮಾರ್ಚ್ 14 ರಿಂದ 17ರವರೆಗೆ ಜಯನಗರದ ಆರ್‌ವಿ ವಿಶ್ವವಿದ್ಯಾಲದ ಆವರಣದಲ್ಲಿ ನಡೆಯಲಿದೆ.

ಈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 30 ದೇಶಗಳ 300 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. 13 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳೇ ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುವುದು ವಿಶೇಷ. ಆಸ್ಟ್ರೇಲಿಯಾ ಈ ಬಾರಿಯ ಚಿತ್ರೋತ್ಸವದ ಫೋಕಸ್‌ ದೇಶವಾಗಿರಲಿದೆ.

ಸೋಮವಾರದಂದು ನಡೆದ ಟಿಎಫ್‌ಎ ಉದ್ಘಾಟನಾ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿನಿಮಾ ಪರಿಣತ ಎನ್. ವಿದ್ಯಾಶಂಕರ್, ‘ಸಮಕಾಲೀನ ಪ್ರಪಂಚವನ್ನು ಬೇರೆ ಯಾವುದೇ ಮಾಧ್ಯಮಕ್ಕಿಂತ ಸಿನಿಮಾದ ಮೂಲಕ ಉತ್ತಮವಾಗಿ ಪ್ರತಿನಿಧಿಸಬಹುದಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಚಲನಚಿತ್ರ ಶಾಲೆಗಳ ಕೊರತೆಯಿದೆ. ಆರ್‌.ವಿ ವಿಶ್ವವಿದ್ಯಾಲಯದ ಚಲನಚಿತ್ರೋತ್ಸವದಂತಹ ಉಪಕ್ರಮಗಳು ಹೆಚ್ಚು ಪ್ರಭಾವಶಾಲಿಯಾಗಿವೆ’ ಎಂದರು.

‘ಟಿಐಎಫ್‌ಎ 2024‘ ಚಿತ್ರೋತ್ಸವಕ್ಕೆ ಆಸ್ಟ್ರೇಲಿಯಾದಿಂದ 14 ಅತ್ಯುತ್ತಮ ಚಲನಚಿತ್ರಗಳು ಆಯ್ಕೆಗೊಂಡಿವೆ. ಪ್ರತಿಭಾನ್ವಿತ ನಿರ್ದೇಶಕಿ ನೈನಾ ಸೇನ್ ನಿರ್ದೇಶಿಸಿದ ಚಿತ್ರ ‘ದಿ ಸಾಂಗ್ ಕೀಪರ್ಸ್’ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿರಲಿದೆ ಎಂದು ವಿವಿ ತಿಳಿಸಿದೆ.

ಮಾಸ್ಟರ್ ಕ್ಲಾಸ್‌, ಚಲನಚಿತ್ರ ಸಂಬಂಧಿ ಚರ್ಚೆಗಳು ಮತ್ತು ಇತರ ಚಟುವಟಿಕೆಗಳಲ್ಲಿ 25 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ₹250 ಪ್ರವೇಶ ಶುಲ್ಕವಿರುತ್ತದೆ. ಮಾರ್ಚ್‌ 14ರಂದು ಬೆಳಿಗ್ಗೆ 10ರಿಂದ 1 ಗಂಟೆವರೆಗೆ ಚಿತ್ರೋತ್ಸವದ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://bit.ly/49qAmfu ಜಾಲತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT