ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 24, 2023

Published 24 ಮೇ 2023, 13:30 IST
Last Updated 24 ಮೇ 2023, 13:30 IST
ಅಕ್ಷರ ಗಾತ್ರ
Introduction

ಜಾಗತಿಕ ನಾಯಕನಾಗಿ ಬೆಳೆಯುತ್ತಿರುವ ಭಾರತ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ. ಕುಮಾರಸ್ವಾಮಿ ಆಯ್ಕೆ, ‘ಕೈ’ ಶಾಸಕರಿಗೆ ಡಿಕೆಶಿ ಸಲಹೆ, ನೂತನ ಸ್ಪೀಕರ್‌ ಯು.ಟಿ ಖಾದರ್‌ ಅಧಿಕಾರ ಸ್ವೀಕಾರ ಸೇರಿದಂತೆ ಈ ದಿನ ಗಮನ ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ.

1

ಸಿದ್ದರಾಮಯ್ಯ ವಿರುದ್ಧ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ದೂರು

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 24 ಹಿಂದೂಗಳ ಹತ್ಯೆ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರಸಭೆ ಸದಸ್ಯ ಮೊಹಮ್ಮದ್ ರಿಯಾಜ್‌ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ

2

ಜಾಗತಿಕ ನಾಯಕನಾಗಿ ಬೆಳೆಯುತ್ತಿರುವ ಭಾರತ: ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಸಭಾಪತಿ ಜಗದೀಪ್ ಧನಕರ್‌ ಅ
ಸಭಾಪತಿ ಜಗದೀಪ್ ಧನಕರ್‌ ಅ

ವೇಗವಾಗಿ ಬೆಳೆಯುತ್ತಿರುವ ಭಾರತ, 2047ರ ವೇಳೆಗೆ ವಿಶ್ವದ ನಾಯಕನಾಗಲಿದೆ ಎಂದು ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌ ಹೇಳಿದ್ದಾರೆ. ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಆಯೋಜಿಸಿದ್ದ ‘ರುಸ್ತಂಜೀ ಸ್ಮರಣಾರ್ಥ‘ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಸುದ್ದಿಯನ್ನು ಪೂರ್ತಿ ಓದಿ

3

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ. ಕುಮಾರಸ್ವಾಮಿ ಆಯ್ಕೆ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಳೆದ ವಿಧಾನಸಭೆ ಅವಧಿಯಲ್ಲೂ ಮಾಜಿ ಮುಖ್ಯಮಂತ್ರಿ ಅವರೇ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸದನದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.

ಈ ಸುದ್ದಿಯನ್ನು ಪೂರ್ತಿ ಓದಿ

4

ನೂತನ ಸಂಸತ್ ಭವನದಲ್ಲಿ ಬ್ರಿಟೀಷರಿಂದ ನೆಹರು ಪಡೆದ ರಾಜದಂಡ ‘ಸೆಂಗೋಲ್’ ಸ್ಥಾಪನೆ: ಶಾ

ಅಮಿತ್ ಶಾ
ಅಮಿತ್ ಶಾ


ಬ್ರಿಟೀಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ 'ಸೆಂಗೊಲ್' ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ

5

ಸಿಎಲ್‌ಪಿ ಸಭೆ | ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿ: ‘ಕೈ’ ಶಾಸಕರಿಗೆ ಡಿಕೆಶಿ ಸಲಹೆ

ಡಿಕೆಶಿ
ಡಿಕೆಶಿ


‘ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು. ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಶಾಸಕರಿಗೆ ಕಿವಿಮಾತು ಹೇಳಿದರು.

ಈ ಸುದ್ದಿಯನ್ನು ಪೂರ್ತಿ ಓದಿ

6

ಪಾಸ್‌ಪೋರ್ಟ್‌ಗಾಗಿ ರಾಹುಲ್ ಗಾಂಧಿ ಮನವಿ: ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದ ಕೋರ್ಟ್

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಹೊಸದಾಗಿ ಪಾಸ್‌ಪೋರ್ಟ್‌ ಪಡೆಯುವ ಸಂಬಂಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಮೇ 26ಕ್ಕೆ ಮುಂದೂಡಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

7

ಸಿಎಲ್‌ಪಿ ಸಭೆ: ಎಂ.ಬಿ ಪಾಟೀಲ್‌ಗೆ ಎಚ್ಚರಿಕೆ ನೀಡಿದ ಡಿ.ಕೆ ಸುರೇಶ್‌!

ಡಿ.ಕೆ. ಸುರೇಶ್‌
ಡಿ.ಕೆ. ಸುರೇಶ್‌

ವಿಧಾನಸೌಧದ ಸಮ್ಮೇಳನ ಸಭಾಂಗಣದ ಪ್ರವೇಶದ್ವಾರದ ಬಳಿ ಸಂಸದ ಡಿ.ಕೆ. ಸುರೇಶ್ ಮತ್ತು ಸಚಿವ ಎಂ.ಬಿ. ಪಾಟೀಲ ಮುಖಾಮುಖಿಯಾಗಿದ್ದು, ಈ ವೇಳೆ ಸುರೇಶ್​ ಅವರು ಪಾಟೀಲ್ ಅವರನ್ನು ಗುರಾಯಿಸಿ, ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

ಈ ಸುದ್ದಿಯನ್ನು ಪೂರ್ತಿ ಓದಿ

8

ನೂತನ ಸ್ಪೀಕರ್‌ ಯು.ಟಿ ಖಾದರ್‌ ಅಧಿಕಾರ ಸ್ವೀಕಾರ

ಯು.ಟಿ ಖಾದರ್‌
ಯು.ಟಿ ಖಾದರ್‌

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಯು.ಟಿ ಖಾದರ್‌ ಫರೀದ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಸೂಚಿಸಿದರು. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಅನುಮೋದಿಸಿದರು.

ಈ ಸುದ್ದಿಯನ್ನು ಪೂರ್ತಿ ಓದಿ

9

ನೂತನ ಸಂಸತ್ ಭವನ ಉದ್ಘಾಟನೆ: NCP, BRS, RJD ಸೇರಿ ಹಲವು ವಿಪಕ್ಷಗಳಿಂದ ಬಹಿಷ್ಕಾರ

ನೂತನ ಸಂಸತ್‌ ಭವನ
ನೂತನ ಸಂಸತ್‌ ಭವನ


ಮೇ 28 ರಂದು ನಡೆಯಲಿರುವ ನೂತನ ಸಂಸತ್‌ ಭವನ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸುವುದಾಗಿ ತಮಿಳುನಾಡಿನ ಆಡಳಿತರೂಢ ಡಿಎಂಕೆ, ಬಿಹಾರದ ಆಡಳಿತ ಪಕ್ಷ ಆರ್‌ಜೆಡಿ, ತೆಲಂಗಾಣದ ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ, ಮಹಾರಾಷ್ಟ್ರದ ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್‌ ಠಾಕ್ರೆ, ಎನ್‌ಸಿಪಿ, ವಿಸಿಕೆ ಪಕ್ಷಗಳು ಹೇಳಿವೆ.

ಈ ಸುದ್ದಿಯನ್ನು ಪೂರ್ತಿ ಓದಿ

10

  ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ದ್ವೇಷ ಭಾಷಣ ಪ್ರಕರಣದಿಂದ ಖುಲಾಸೆ

ಅಜಂ ಖಾನ್‌ 
ಅಜಂ ಖಾನ್‌ 

ಉತ್ತರ ಪ್ರದೇಶ ನ್ಯಾಯಾಲಯವು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್‌ ಅವರನ್ನು ದ್ವೇಷ ಭಾಷಣ ಪ್ರಕರಣದಿಂದ ಬುಧವಾರ ಖುಲಾಸೆಗೊಳಿಸಿದೆ. 2019ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕಳೆದ ವರ್ಷ (2022ರ) ಅಕ್ಟೋಬರ್‌ನಲ್ಲಿ ಖಾನ್‌ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಅವರು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

ಈ ಸುದ್ದಿಯನ್ನು ಪೂರ್ತಿ ಓದಿ