ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್ ಭವನ ಉದ್ಘಾಟನೆ: NCP, BRS, RJD ಸೇರಿ ಹಲವು ವಿಪಕ್ಷಗಳಿಂದ ಬಹಿಷ್ಕಾರ

Published 24 ಮೇ 2023, 5:25 IST
Last Updated 24 ಮೇ 2023, 5:25 IST
ಅಕ್ಷರ ಗಾತ್ರ

ನವದೆಹಲಿ: ಮೇ 28 ರಂದು ನಡೆಯಲಿರುವ ನೂತನ ಸಂಸತ್‌ ಭವನ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸುವುದಾಗಿ ತಮಿಳುನಾಡಿನ ಆಡಳಿತರೂಢ ಡಿಎಂಕೆ, ಬಿಹಾರದ ಆಡಳಿತ ಪಕ್ಷ ಆರ್‌ಜೆಡಿ, ತೆಲಂಗಾಣದ ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ, ಮಹಾರಾಷ್ಟ್ರದ ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್‌ ಠಾಕ್ರೆ, ಎನ್‌ಸಿಪಿ, ವಿಸಿಕೆ ಪಕ್ಷಗಳು ಹೇಳಿವೆ.

ಈ ಸಮಾರಂಭವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದ್ದಾರೆ.

‘ರಾಷ್ಟ್ರಪತಿಗಳು ಸಂಸತ್‌ನ ಮುಖ್ಯಸ್ಥರು. ಅವರು ಸಂಸತ್‌ ಭವನವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸದೆ, ಅವರಿಗೆ ಅವಮಾನ ಮಾಡಲಾಗುತ್ತಿದೆ. ಹೀಗಾಗಿ ಮೊದಲ ಅಧಿವೇಶನವನ್ನು ಎಲ್ಲಾ ವಿಪಕ್ಷಗಳು ಸೇರಿ ಬಹಿಷ್ಕಾರ ಮಾಡುತ್ತೇವೆ‘ ಎಂದು ಬಿಹಾರದ ಉಪಮುಖ್ಯಮಂತ್ರಿಯೂ ಆಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

‘ಎಲ್ಲಾ ವಿರೋಧ ಪಕ್ಷಗಳು ನೂತನ ಸಂಸತ್‌ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳಿವೆ. ನಾವೂ ಕೂಡ ಬಹಿಷ್ಕರಿಸುತ್ತೇವೆ‘ ಎಂದು ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್‌ ಠಾಕ್ರೆ ಪಕ್ಷದ ಸಂಜಯ್ ರಾವುತ್‌ ಹೇಳಿದ್ದಾರೆ.

‘ದೇಶದ ಅರ್ಥಿಕ ಪರಿಸ್ಥಿತಿ ಬಿಗಾಡಾಯಿಸಿರುವಾಗ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸೆಂಟ್ರಲ್‌ ವಿಸ್ತಾ ನಿರ್ಮಾಣ ಮಾಡಿದ್ದರ ಬಗ್ಗೆ ಮೊದಲು ನಾವೇ ಪ್ರಶ್ನೆ ಎತ್ತಿದ್ದೆವು. ಈ ಯೋಜನೆಯನ್ನು ಪ್ರಧಾನಮಂತ್ರಿಯವ ಇಚ್ಛೆಗಾಗಿ ಮಾಡಲಾಗಿದೆ. ಇದರ ಅಗತ್ಯ ಇತ್ತೇ? ಹಳೆಯ ಸಂಸತ್‌ ಭವನ ಇನ್ನೂ ನೂರು ವರ್ಷಕ್ಕೆ ಸಾಲುತ್ತಿತ್ತು. ಹಳೆಯ ಸಂಸತ್‌ ಭವನಕ್ಕೆ ಆರೆಸ್ಸೆಸ್‌ ಹಾಗೂ ಬಿಜೆಪಿಗೆ ಸಂಬಂಧ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ ಎನ್ನುವ ಫಲಕ ಹಾಕಲು ಹೊಸ ಭವನವನ್ನು ನಿರ್ಮಾಣ ಮಾಡಲಾಗಿದೆ‘ ಎಂದು ಸಂಜಯ್‌ ರಾವುತ್‌ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT