ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ: ಪ್ರತಿಭಟನೆ ನಿರ್ಧಾರ ವಾಪಸ್‌

Published 30 ಸೆಪ್ಟೆಂಬರ್ 2023, 21:37 IST
Last Updated 30 ಸೆಪ್ಟೆಂಬರ್ 2023, 21:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ (ಸಿಐಟಿಯು) ಅ.5ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ವಾಪಸ್‌ ಪಡೆದಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆಯ ಮೇರೆಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ನೇತೃತ್ವದಲ್ಲಿ ನೌಕರರೊಂದಿಗೆ ಶನಿವಾರ ಸಭೆ ನಡೆಯಿತು. 

ಹಿಂದೆ ಪ್ರತಿಭಟನೆ ಸಂದರ್ಭಗಳಲ್ಲಿ ಅಮಾನತು ಮಾಡಲಾಗಿರುವ ಸಿಬ್ಬಂದಿಯನ್ನು ವಾಪಸ್‌ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು. ಸಿಬ್ಬಂದಿ ಕೊರತೆ ಇದ್ದು, ಕೂಡಲೇ ಭರ್ತಿ ಮಾಡಬೇಕು. ಜಿಪಿಸಿ ಮಾದರಿಯಲ್ಲಿ (ಬಸ್ ಮತ್ತು ಚಾಲಕ ಖಾಸಗಿಯವರದ್ದು, ನಿರ್ವಾಹಕ ಮಾತ್ರ ನಿಗಮದವರು) ಬಸ್‌ ಖರೀದಿ ಮಾಡಬಾರದು. ಬಸ್ ಮಾತ್ರ ಖರೀದಿಸಬೇಕು. ನಿರ್ವಾಹಕರು, ಚಾಲಕರು ಇಬ್ಬರೂ ನಿಗಮದವರಾಗಿರಬೇಕು. ಪಿಪಿಪಿ ಮಾದರಿಯ ಯೋಜನೆಗಳಲ್ಲಿ ಖಾಸಗಿ ಪ್ರಮಾಣ ಕಡಿಮೆ ಇರಬೇಕು ಸಹಿತ ಅನೇಕ ಬೇಡಿಕೆಗಳನ್ನು ನೌಕರರು ಮುಂದಿಟ್ಟರು.

ಬೇಡಿಕೆಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ಸಾರಿಗೆ ಸಚಿವರೊಂದಿಗೆ ಮತ್ತೆ ಸಭೆ ನಡಸ ಲಾಗುವುದು ಎಂದು ವ್ಯವ ಸ್ಥಾಪಕ ನಿರ್ದೇಶಕರು ಭರವಸೆ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ‘ನಮ್ಮ ಬೇಡಿಕೆಗಳನ್ನು ಈಡೇರಿ ಸಲು ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭರವಸೆ ನೀಡಿರುವ ಕಾರಣ ಪ್ರತಿಭಟನೆ ಹಿಂತೆಗೆದು ಕೊಳ್ಳಲಾಗಿದೆ’ ಎಂದು ಫೆಡರೇಷನ್‌ ಅಧ್ಯಕ್ಷ ಎಚ್‌.ಡಿ. ರೇವಪ್ಪ ತಿಳಿಸಿ ದ್ದಾರೆ. ಉಪಾಧ್ಯಕ್ಷ ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್, ನೌಕರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT