ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್ ಪ್ರಸಾರ ಸ್ಥಗಿತ ಜ.31ರ ಗಡುವು

Last Updated 24 ಜನವರಿ 2019, 18:34 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಹೊಸ ನೀತಿಯನ್ನು ವಿರೋಧಿಸಿ ರಾಜ್ಯದ ಕೇಬಲ್ ಆಪರೇಟರ್‌ಗಳು, ರಾಜ್ಯದಾದ್ಯಂತ ಗುರುವಾರ ಕೇಬಲ್‌ ಸಂಪರ್ಕ ಸ್ಥಗಿತಗೊಳಿಸಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ದಕ್ಷಿಣ ಭಾರತ ಕೇಬಲ್ ಆಪರೇಟರ್ ಒಕ್ಕೂಟ ಕರೆ ನೀಡಿದ್ದ ಪ್ರತಿಭಟನೆಗೆ ಕರ್ನಾಟಕ ಕೇಬಲ್ ಟಿ.ವಿ ಆಪರೇಟರ್ ಒಕ್ಕೂಟ ಬೆಂಬಲ ನೀಡಿತ್ತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೇಬಲ್ ಬಂದ್‌ ಮಾಡಲಾಗಿತ್ತು. ‘ಈ ಪ್ರತಿಭಟನೆ ಸಾಂಕೇತಿಕ ಅಷ್ಟೇ. ಜ. 31ರೊಳಗಾಗಿ ಹೊಸ ನೀತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಫೆ. 1ರಿಂದ ದೇಶದಾದ್ಯಂತ ಅನಿರ್ದಿರ್ಷ್ಟಾವಧಿ ಕೇಬಲ್‌ ಪ್ರಸಾರ ಸ್ಥಗಿತಗೊಳಿಸಲಿದ್ದೇವೆ. ದೇಶದ ಎಲ್ಲ ಕೇಬಲ್ ಆಪರೇಟರ್‌ಗಳು ದೆಹಲಿಗೆ ಹೋಗಿ ಧರಣಿ ನಡೆಸಲಿದ್ದೇವೆ’ ಎಂದು ರಾಜ್ಯ ಕೇಬಲ್ ಟಿ.ವಿ ಆಪರೇಟರ್ ಒಕ್ಕೂಟದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT