ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕೇಂದ್ರಗಳಿಗೆ ಬಿಡುಗಡೆಯಾಗದ ಅನುದಾನ: ಬಾಡಿಗೆ ಕಟ್ಟಲು ಮಾಂಗಲ್ಯ ಅಡ!

Published 10 ಆಗಸ್ಟ್ 2023, 19:25 IST
Last Updated 10 ಆಗಸ್ಟ್ 2023, 19:25 IST
ಅಕ್ಷರ ಗಾತ್ರ

ಬೆಳಗಾವಿ/ಮಂಗಳೂರು: ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಂಗಲ್ಯ ಅಡವಿಟ್ಟು ಬಾಡಿಗೆ ಕಟ್ಟಿದರೆ, ಮತ್ತೊಬ್ಬ ಕಾರ್ಯಕರ್ತೆ ಸಾಲ ಮಾಡಿ ಕಳೆದ 20 ತಿಂಗಳಿನಿಂದ ಬಾಡಿಗೆ ಕಟ್ಟುತ್ತಿದ್ದಾರೆ.

ಬೆಳಗಾವಿಯ ಮೆಣಸಿನಗಲ್ಲಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಬಾಡಿಗೆ ಕಟ್ಟಲು ಅಡವಿಟ್ಟಿದ್ದ ಮಾಂಗಲ್ಯ

ವನ್ನು ಅಧಿಕಾರಿಗಳು ಹಣ ಪಾವತಿಸಿ, ಬಿಡಿಸಿಕೊಟ್ಟಿದ್ದಾರೆ. ದರಬಾರಗಲ್ಲಿಯ ಅಂಗನವಾಡಿಗೆ 20 ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ. ಕಾರ್ಯಕರ್ತೆ ಈಗಲೂ ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದಾರೆ.

ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಇಂತಹ ಹಲವು ಉದಾಹರಣೆಗಳು ಸಿಗುತ್ತವೆ. ಕೇಂದ್ರವನ್ನು ಮುಚ್ಚುವ ಸ್ಥಿತಿ ಬರಬಾರದು ಎಂದು ಕಾರ್ಯಕರ್ತೆಯರೇ ಎಷ್ಟೋ ಕಡೆ ಬಾಡಿಗೆ ಹಣವನ್ನು ಹೊಂದಿಸುತ್ತಿದ್ದಾರೆ. ‘ಅಂಗನವಾಡಿ ಕಟ್ಟಡದ ಬಾಡಿಗೆ ಮಾತ್ರವಲ್ಲ, ಮೊಟ್ಟೆ ಖರೀದಿ ಮಾಡಿದ ಹಣವನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಏಳು ತಿಂಗಳಗಳಿಂದ ಬಾಕಿ ಉಳಿಸಿಕೊಂಡಿದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

ಬಾಡಿಗೆ ಪಾವತಿಸದ ಕಾರಣ ಜಾಗ ಖಾಲಿ ಮಾಡುವಂತೆ ಕಟ್ಟಡ ಮಾಲೀಕರು ಒಂದೆಡೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿ ಇಲಾಖೆಯ ಅಧಿಕಾರಿಗಳು ದಿನ ದೂಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಏಳು ತಿಂಗಳಿನಿಂದ ಅನುದಾನ ಬಿಡುಗಡೆ ಆಗಿಲ್ಲ. ಇದರ ಪರಿಣಾಮ ವಿದ್ಯುತ್, ಇಂಟರ್‌ನೆಟ್‌ ಬಿಲ್ ಪಾವತಿಸಲು, ವಾಹನಗಳಿಗೆ ಇಂಧನ ಹಾಕಿಸಲು ಅಲ್ಲದೇ ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳಿದ್ದು, 19,802 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿ ಇಲ್ಲವೆ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಒದಗಿಸಲಾಗಿದೆ.

‘ನಗರದ ಅಂಗನವಾಡಿಗೆ ತಿಂಗಳಿಗೆ ₹4,000 ಹಾಗೂ ಗ್ರಾಮೀಣ ಅಂಗನವಾಡಿಗೆ ₹1,000 ಬಾಡಿಗೆ ಹಣ ನೀಡುತ್ತದೆ. ಈ ಮೊತ್ತವನ್ನೂ ಭರಿಸಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಗರದಲ್ಲಿ ಒಂದು ಅಂಗನವಾಡಿ ಕೇಂದ್ರದ ತಿಂಗಳ ಸರಾಸರಿ ವಿದ್ಯುತ್ ಬಿಲ್ ₹210 ಮತ್ತು ಗ್ರಾಮೀಣ ಭಾಗದಲ್ಲಿ ₹150 ಬರುತ್ತದೆ. ವಿದ್ಯುತ್ ಬಿಲ್ ಪಾವತಿಸದ್ದಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ ಪ್ರಕರಣಗಳು ನಡೆದಿವೆ’ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು.

‘ಕಚೇರಿ, ವಾಹನಗಳ ನಿರ್ವಹಣೆ, ಲೇಖನ ಸಾಮಗ್ರಿ ಖರೀದಿಗೂ ಅನುದಾನ ಬಂದಿಲ್ಲ. ವಾಹನಗಳ ವಿಮಾ ಕಂತು ಪಾವತಿಗೆ ಹಣಕಾಸಿನ ಕೊರತೆಯಿದೆ. ತುರ್ತು ಸಂದರ್ಭ ಹೊರತುಪಡಿಸಿ ಉಳಿದ ದಿನ ಅಧಿಕಾರಿಗಳು ಆಟೊರಿಕ್ಷಾ, ಬಸ್‌ಗಳಲ್ಲಿ ಓಡಾಡುತ್ತಾರೆ. ಸಿಬ್ಬಂದಿಗೆ ಎರಡು ತಿಂಗಳಿನಿಂದ ಸಂಬಳ ಪಾವತಿ ಆಗಿಲ್ಲ’ ಎಂದು ಇಲಾಖೆಯ ಕಚೇರಿ

ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT