ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕೆರೆಗಳ ಅವೈಜ್ಞಾನಿಕ ಅಭಿವೃದ್ಧಿ: ವರದಿ ಕೇಳಿದ ಎನ್‌ಜಿಟಿ

Published 17 ಮೇ 2024, 0:29 IST
Last Updated 17 ಮೇ 2024, 0:29 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೆರೆಗಳ ನಿರ್ಲಕ್ಷ್ಯ ಹಾಗೂ ಅವುಗಳ ಅವೈಜ್ಞಾನಿಕ ಪುನರುಜ್ಜೀವನ ಕಾಮಗಾರಿ ಸಂಬಂಧ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವರದಿ ಕೇಳಿದೆ. 

ಕೆರೆಗಳ ನಿರ್ಲಕ್ಷ್ಯದ ಕುರಿತು ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪ್ರಧಾನ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದಲೂ ಪ್ರತಿಕ್ರಿಯೆ ಕೇಳಿದೆ. 

ಬೆಂಗಳೂರು ಜಲಮಂಡಳಿಯು 257 ಸಂಭಾವ್ಯ ನೀರಿನ ಒತ್ತಡ ಪ್ರದೇಶಗಳನ್ನು ಗುರುತಿಸಿದೆ. ನಗರವು ದೊಡ್ಡ ಪ್ರಮಾಣದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಪೀಠವು ಹೇಳಿದೆ.

‘ನಗರಕ್ಕೆ ನೀರು ಪೂರೈಸುವ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದೆ. ನಗರದಲ್ಲಿ ಕೊಳವೆಬಾವಿಗಳ ಕೊರೆಯುವಿಕೆ ಹೆಚ್ಚಾಗಿದೆ. ಕೆರೆಗಳ ಅತಿಕ್ರಮಣ ವ್ಯಾಪಕವಾಗಿದೆ. ಸರಾಸರಿಗಿಂತ ಕಡಿಮೆ ಮಳೆ ಹಾಗೂ ಹೆಚ್ಚಿದ ತಾಪಮಾನವು ಜಲ ಬಿಕ್ಕಟ್ಟಿಗೆ ಕಾರಣವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ. 

‘ಕೆರೆಗಳ ಅತಿಕ್ರಮಣ ತಡೆಗೆ ಕ್ರಮ ಕೈಗೊಂಡಿಲ್ಲ. ಜತೆಗೆ, ಜಲ ಕಾಯಗಳಿಗೆ ಸಂಸ್ಕರಿಸದ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಇದು ಕಡಿಮೆ ನೀರಿನ ಲಭ್ಯತೆಗೆ ಹಾಗೂ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ’ ಎಂದೂ ಹೇಳಿದೆ. 

ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ನ್ಯಾಯಪೀಠ ವರ್ಗಾಯಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 12ರಂದು ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT