ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಗೋದಾಮುಗಳ ಎದುರು ಕಾಯುವುದು, ಗೊಬ್ಬರ ಬಂದ ತಕ್ಷಣ ಖರೀದಿಸಲು ಮುಗಿಬೀಳುವುದು ಸಾಮಾನ್ಯವಾಗಿದೆ. ದಕ್ಷಿಣ ಕನ್ನಡ, ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಗೊಬ್ಬರದ ಕೊರತೆ ಇಲ್ಲ. ದಾವಣಗೆರೆಯಲ್ಲಿ ದುಪ್ಪಟ್ಟು ದರದಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎನ್ನುವುದು ರೈತರ ದೂರು. ಕೊಪ್ಪಳದಲ್ಲಿ ಪೊರೈಕೆ ಇದ್ದರೂ ಅಸಮರ್ಪಕ ವಿಲೇವಾರಿಯಿಂದ ತೊಂದರೆಯಾಗಿದೆ. ಬೆಂಗಳೂರು ಗ್ರಾಮಾಂತರ ಸೇರಿ ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣ ಬಿತ್ತನೆ ವಿಳಂಬವಾಗಿದ್ದು, ಯೂರಿಯಾ ಸೇರಿ ರಸಗೊಬ್ಬರ ಕೇಳುವರೇ ಇಲ್ಲದಂತಾಗಿದೆ.

ಹುಬ್ಬಳ್ಳಿ: ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡು ತಿಂಗಳು ಕಳೆದರೂ ಕೆಲವೆಡೆ ರಸಗೊಬ್ಬರಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ಕೆಲವು ಕಡೆ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಿದ್ದಾರೆ.

ಧಾರವಾಡ, ಗದಗ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇದ್ದು, ಕೃಷಿ ಇಲಾಖೆಯವರು ಗೊಬ್ಬರ ಒದಗಿಸಲು ಕ್ರಮ ವಹಿಸಬೇಕು’ ಎಂದು ರೈತ ಶಂಕರಪ್ಪ ಅಂಬಲಿ ಒತ್ತಾಯಿಸಿದರು. ಸರ್ಕಾರ ರೈತರ ಬೇಡಿಕೆಗೆ ತಕ್ಕಷ್ಟು ಯೂರಿಯಾ ಪೂರೈಸಬೇಕು’ ಎಂದು ರಾಜ್ಯ ರೈತ ಸಂಘದ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಾನಂದ ಇಟಗಿ ಒತ್ತಾಯಿಸಿದರು.

‘ಅಗತ್ಯ ಇರುವಷ್ಟು ರಸಗೊಬ್ಬರ ಪೂರೈಸಲು ನೆರವು ಕೋರಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ‘ ಎಂದು ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್.ತಾರಾಮಣಿ ಹೇಳಿದರು.

‘ರೈತರು ಕೇಳಿದಷ್ಟು ಯೂರಿಯಾ ಗೊಬ್ಬರ ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದಲೇ, ಜಿಲ್ಲೆಯಾದ್ಯಂತ ಗೊಬ್ಬರದ ಕೊರತೆ ಉಂಟಾಗಿದೆ’ ಎಂದು ಹಾವೇರಿ ಜಿಲ್ಲೆಯ ರೈತರು ಆರೋಪಿಸಿದ್ದಾರೆ. ಆದರೆ, ಹಾವೇರಿ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಅವರು, ‘ಹಳೆಯದ್ದು ಹಾಗೂ ಹೊಸ ದಾಸ್ತಾನು ಸೇರಿ 59,507 ಟನ್ ಗೊಬ್ಬರ ಜಿಲ್ಲೆಯಲ್ಲಿ ಹಂಚಿಕೆ ಮಾಡಲಾಗಿದೆ’ ಎಂದಿದ್ದಾರೆ.

‘ಗೊಬ್ಬರ ಹಾಕದಿದ್ದರೆ ಬೆಳೆ ಹಾಳಾಗುತ್ತದೆ. ರೈತರು ಚಿಂತೆಯಲ್ಲಿದ್ದಾರೆ. ಗೊಬ್ಬರ ಪೂರೈಸಬೇಕು’ ಎಂದು ಹಾವೇರಿ ರೈತ ರಾಮಪ್ಪ ಬರಮಪ್ಪನವರ ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಯೂರಿಯಾ ಕೊರತೆಯ ದೂರುಗಳಿವೆ. ಬನವಾಸಿ, ಮುಂಡಗೋಡ ಭಾಗದಲ್ಲಿ ಭತ್ತ, ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಯೂರಿಯಾ ಖರೀದಿಗೆ ಅಲೆದಾಡುತ್ತಿದ್ದಾರೆ.

‘ಯೂರಿಯಾ ದಾಸ್ತಾನು ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಉಳಿದ ರಸಗೊಬ್ಬರಗಳ ಪೂರೈಕೆ ಸಾಕಷ್ಟಿದೆ’ ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಹೇಳಿದರು.

‘ಯೂರಿಯಾದಲ್ಲಿ ಕೇವಲ ಸಾರಜನಕ ಅಂಶ ಮಾತ್ರವೇ ಇದ್ದು, ಇದು ಸಸಿಗಳನ್ನು ಹಸಿರಾಗಿಸುತ್ತದೆಯೇ ಹೊರತು ಫಸಲು ಹೆಚ್ಚಾಗುವುದಿಲ್ಲ. ಪೊಟ್ಯಾಷಿಯಂ, ರಂಜಕದ ಅಂಶವುಳ್ಳ ರಸಗೊಬ್ಬರಗಳ ಬಳಕೆಗೂ ಆದ್ಯತೆ ನೀಡಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಶಿವಪ್ರಸಾದ ಗಾಂವಕರ್ ತಿಳಿಸಿದರು.

ವಿಜಯನಗರ, ಬಳ್ಳಾರಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಬೇಡಿಕೆಯಷ್ಟು ಯೂರಿಯಾ ಗೊಬ್ಬರದ ದಾಸ್ತಾನು ಇದೆ. ‘ರೈತರಿಗೆ ದ್ರವರೂಪದ ಯೂರಿಯಾ (ಲಿಕ್ವಿಡ್) ಬಳಕೆ ಬಗ್ಗೆ ಮನವರಿಕೆ ಮಾಡಲಾಗುತ್ತಿದ್ದು, ಈಗಾಗಲೇ ಶೇ 20ರಷ್ಟು ಮಂದಿ ಲಿಕ್ವಿಡ್ ಯೂರಿಯಾ ಬಳಸುತ್ತಿದ್ದಾರೆ ಎಂದು ವಿಜಯನಗರ ಜಿಲ್ಲೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಾಸಾಯನಿಕ ಗೊಬ್ಬರದ ಕೊರತೆ ಇಲ್ಲ ಎಂದು ವಿಜಯಪುರ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ ತಿಳಿಸಿದ್ದಾರೆ. ‘ನ್ಯಾನೋ ಯೂರಿಯಾ ಗೊಬ್ಬರವೂ ಜಿಲ್ಲೆಯಲ್ಲಿ ಕೊರತೆ ಇಲ್ಲ. ಆದರೆ, ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿಲ್ಲ’ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಗೆ ಈ ವರ್ಷ 1.08 ಲಕ್ಷ ಟನ್ ರಸಗೊಬ್ಬರದ ಅಗತ್ಯವಿದೆ. ಅದಕ್ಕೆ ಪ್ರತಿಯಾಗಿ ಸದ್ಯ 43 ಸಾವಿರ ಟನ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಸೋಮಸುಂದರ್ ತಿಳಿಸಿದರು.

‘ಯೂರಿಯಾ ಜೊತೆಗೆ, ಲಿಕ್ವಿಡ್ ಯೂರಿಯಾ, ಡಿಎಪಿ ಮತ್ತು ಇತರ ಕೃಷಿ ಸಲಕರಣೆಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ’ ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆರೋಪಿಸಿದರು.

‘ಬೆಳಗಾವಿ ಜಿಲ್ಲೆಗೆ ಏಪ್ರಿಲ್ 1ರಿಂದ ಜುಲೈ 30ರವರೆಗೆ 81,638 ಟನ್ ಯೂರಿಯಾ ಅಗತ್ಯವಿತ್ತು. 96,899 ಟನ್ ದಾಸ್ತಾನು ಮಾಡಿಕೊಂಡಿದ್ದೆವು. ಈ ಪೈಕಿ 81,104 ಟನ್ ವಿತರಿಸಿದ್ದೇವೆ. 15,795 ಟನ್ ಇನ್ನೂ ಉಳಿದಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಎಕರೆಗೆ ಒಂದೂವರೆಗೆ ಚೀಲದಿಂದ ಎರಡು ಚೀಲ ಗೊಬ್ಬರ ಹಾಕಿದರೆ ಸಾಕು. ಹಲವರು ಮಿತಿಮೀರಿ ಹಾಕುತ್ತಾರೆ. ನ್ಯಾನೊ ಯೂರಿಯಾ ಬಳಸಬಹುದು
ಮಂಜುನಾಥ ಅಂತರವಳ್ಳಿ ಧಾರವಾಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ

ಡ್ರೋನ್ ಬಳಸಿ ಲಿಕ್ವಿಡ್ ಯೂರಿಯಾ ಹಾಕುವ ವಿಧಾನ ಬಹಳ ಉಪಯುಕ್ತ. ನಾನು ನನ್ನ 20 ಎಕರೆ ಗದ್ದೆಗೆ ಈ ವಿಧಾನ ಬಳಸುತ್ತಿದ್ದೇನೆ. ರೈತರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು
ಮುನಿಸ್ವಾಮಿ ರೈತ ಬಸವನದರ್ಗ

ಯೂರಿಯಾಗೆ ನಿಗದಿಗಿಂತ ಹೆಚ್ಚು ಹಣ ಪಡೆದರೆ ಅಕ್ರಮ ದಾಸ್ತಾನು ಮಾಡಿದರೆ ದೂರು ನೀಡಿ
ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ

ಬೇಡಿಕೆಗಿಂತ ಹೆಚ್ಚು ಲಭ್ಯ

ಮೈಸೂರು: ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರದ ದಾಸ್ತಾನಿದೆ. ಶ್ರೀರಂಗಪಟ್ಟಣ ಹೊರತು ಪಡಿಸಿ ಬಹುತೇಕ ಕಡೆಗಳಲ್ಲಿ ಕೊರತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಮೈಸೂರು ಜಿಲ್ಲೆಯಲ್ಲಿ ಬೇಡಿಕೆಗೆ ಹಲವು ಪಟ್ಟು ಹೆಚ್ಚಿನ ದಾಸ್ತಾನು ಇದೆ. ಸದ್ಯದಲ್ಲಿ ರಸಗೊಬ್ಬರದ ಕೊರತೆ ಆಗದು ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ. ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ ತಿಳಿಸಿದರು. ಯೂರಿಯಾ ಮಾರಾಟವಾದಂತೆ ಅದರ ಪ್ರಮಾಣವನ್ನು ದಾಖಲಿಸಬೇಕು. ಆದರೆ ಬಹಳಷ್ಟು ಸೊಸೈಟಿಗಳು ಹಾಗೂ ಖಾಸಗಿ ಮಾರಾಟಗಾರರು ಪೋರ್ಟಲ್ನಲ್ಲಿ ದಾಖಲಿಸುತ್ತಿಲ್ಲ. ಹೀಗಾಗಿ ಇಡೀ ರಾಜ್ಯದಲ್ಲಿಯೇ ಹಾಸನ ಜಿಲ್ಲೆಯ ಪಿಒಎಸ್ನಲ್ಲಿ ಅತಿ ಹೆಚ್ಚು ಯೂರಿಯಾ ಉಳಿದಿದೆ. ಹೊಸ ಯೂರಿಯಾ ಗೊಬ್ಬರವನ್ನು ಕಳುಹಿಸಲು ಆಗುವುದಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ‘ಸದ್ಯದ ಪರಿಸ್ಥಿತಿಯಲ್ಲಿ ಯೂರಿಯಾದ ಕೊರತೆ ಎದುರಾಗಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಗೊಬ್ಬರವನ್ನು ಈಗಾಗಲೇ ಪೂರೈಕೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದರು. ‘ಮಂಡ್ಯ ಜಿಲ್ಲೆಯಲ್ಲಿ 19343 ಯೂರಿಯಾವನ್ನು ಮಾರಾಟ ಮಾಡಿದ್ದೇವೆ. 7519 ಟನ್ ದಾಸ್ತಾನು ಇದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 8539 ಟನ್ನಷ್ಟು ಗೊಬ್ಬರವನ್ನು ರೈತರು ಖರೀದಿಸಿದ್ದು ಇನ್ನೂ 4218 ಟನ್ ಉಳಿದಿದೆ. ಸದ್ಯಕ್ಕೆ ಯಾವುದೇ ಕೊರತೆ ಇಲ್ಲ.

ಮಳೆಗಾಲದಲ್ಲಿ ಗೊಬ್ಬರ ಬಳಕೆ ಕಡಿಮೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೊಬ್ಬರಕ್ಕೆ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದರು. ‘ಯೂರಿಯಾವನ್ನು ಸೆಪ್ಟೆಂಬರ್ನಲ್ಲಿ ಅಡಿಕೆ ಬೆಳೆಗೆ ಬಳಸುತ್ತಾರೆ. ಭತ್ತದ ನಾಟಿ ಈಗಷ್ಟೇ ಅಗುತ್ತಿದೆ. ಅದಕ್ಕೆ ಒಂದು ತಿಂಗಳ ನಂತರವರಷ್ಟೇ ಗೊಬ್ಬರ ಬಳಸುತ್ತಾರೆ’ ಎಂದರು. ಉಡುಪಿ ಜಿಲ್ಲೆಯಲ್ಲಿ ರೈತರು ರಸಗೊಬ್ಬರಗಳನ್ನು ಕಡಿಮೆ ಬಳಸುತ್ತಾರೆ. ಕೋಳಿ ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ಬಳಸುತ್ತಾರೆ. ಹೀಗಾಗಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರಗಳ ಕೊರತೆ ಎದುರಾಗಿಲ್ಲ ಎಂದು ರೈತರು ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಬಯಲು ಸೀಮೆಯಲ್ಲಿ ಮಳೆ ಕೊರತೆ ಇರುವುದರಿಂದ ಯೂರಿಯಾ ಬೇಡಿಕೆ ಕಾಣಿಸುತ್ತಿಲ್ಲ.

ದುಪ್ಪಟ್ಟು ದರದಲ್ಲಿ ಮಾರಾಟ

ದಾವಣಗೆರೆ: ಜಿಲ್ಲೆಯಲ್ಲಿ ಕೆಲವು ಅಂಗಡಿಗಳಲ್ಲಿ ಯೂರಿಯೂ ಲಭ್ಯವಿದ್ದರೂ ರೈತರು ದುಬಾರಿ ಮೊತ್ತ ಪಾವತಿಸಿ ಖರೀದಿಸಬೇಕಾದ ಅನಿವಾರ್ಯತೆ ಇದೆ. ಸದ್ಯ ಯೂರಿಯಾ ‘ನೋ ಸ್ಟಾಕ್’ ಬೋರ್ಡ್ ಹಾಕಿರುವುದರಿಂದ ರೈತರ ಸಾಲು ಕಾಣುತ್ತಿಲ್ಲ’ ಎಂದು ಗೊಬ್ಬರದ ಅಂಗಡಿ ಮಾಲೀಕರೊಬ್ಬರು ಹೇಳಿದರು. ‘50 ಕೆ.ಜಿ. ತೂಕದ ₹265 ಬೆಲೆಯ ಒಂದು ಚೀಲ ಗೊಬ್ಬರ ₹400 ರಿಂದ₹600ರವರೆಗೂ ಮಾರಾಟವಾಗುತ್ತಿದೆ’ ಎಂದು ರೈತ ಕೊಳೇನಹಳ್ಳಿ ಬಿ.ಎಂ.ಸತೀಶ್ ದೂರಿದರು. ‘ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದ ಅಂಗಡಿಗಳ ಮಾಲೀಕರ ವಿರುದ್ಧ ಪ್ರಸಕ್ತ ಸಾಲಿನಲ್ಲಿ 4 ಪ್ರಕರಣಗಳು ದಾಖಲಾಗಿವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು. ಚಿತ್ರದುರ್ಗದಲ್ಲಿ ₹280 ಬೆಲೆಯ ಪ್ರತಿ ಚೀಲ ಯೂರಿಯಾ ₹500ಕ್ಕೆ ಹೆಚ್ಚಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ‘ಅಂಗಡಿ ಮಾಲೀಕರ ಕಳ್ಳಾಟದಿಂದ ರೈತರು ಪರದಾಡುವಂತಾಗಿದೆ’ ಎಂದು ರೈತ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಆರೋಪಿಸಿದರು. ‘ಜಿಲ್ಲೆಯಲ್ಲಿ ಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಹೇಳಿದರು.

ಪೂರೈಕೆ ಹೆಚ್ಚಿದ್ದರೂ ಕೊರತೆ

ಕೊಪ್ಪಳ: ಜಿಲ್ಲೆಯಲ್ಲಿ ಯೂರಿಯಾ ಬೇಡಿಕೆಗಿಂತ ಹೆಚ್ಚು ಪೊರೈಕೆಯಾದರೂ ಅಸಮರ್ಪಕ ವಿಲೇವಾರಿಯಿಂದ ರೈತರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ 33459 ಟನ್ ರಸಗೊಬ್ಬರದ ದಾಸ್ತಾನು ಇದ್ದು ಇದರಲ್ಲಿ 28757 ಟನ್ ವಿತರಣೆ ಮಾಡಲಾಗಿದೆ. ಇನ್ನೂ 5000 ಟನ್ ಗೊಬ್ಬರ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ‘ಕೆಲವರು ಯೂರಿಯಾ ಜೊತೆಗೆ ಲಿಂಕ್ ಗೊಬ್ಬರ ಖರೀದಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಭಾಗ್ಯನಗರದ ರೈತ ಮಹಿಳೆ ಸಾವಿತ್ರಮ್ಮ ಆರೋಪಿಸಿದರು. ರಾಯಚೂರು ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ ಹೇಳಿದರು. ‘ಬೀದರ್ ಜಿಲ್ಲೆಯಲ್ಲಿ ನ್ಯಾನೊ ಯೂರಿಯಾ ಲಭ್ಯತೆ ಇದೆ. ಆದರೆ ರೈತರು ಅದನ್ನು ಖರೀದಿಸುತ್ತಿಲ್ಲ. ಸದ್ಯ ಎಲ್ಲೂ ಗೊಬ್ಬರದ ಸಮಸ್ಯೆ ಉಂಟಾಗಿಲ್ಲ’ ಎಂದು ಬೀದರ್ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಹೇಳಿದರು. ‘ಕಲಬುರಗಿ ಜಿಲ್ಲೆಯಲ್ಲಿ ಶೇ80ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. 3665 ಟನ್ ಯೂರಿಯಾ ಉಳಿದಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ‘ಯಾದಗಿರಿ ಜಿಲ್ಲೆಗೆ 14836 ಟನ್ ಯೂರಿಯಾ ಪೂರೈಕೆಯಾಗಿದ್ದು 8258 ಮೆಟ್ರಿಕ್ ಟನ್ ದಾಸ್ತಾನು ಇದೆ’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು ಹೇಳಿದರು.

ಕೇಳುವವರೇ ಇಲ್ಲ!

ಬೆಂಗಳೂರು ಗ್ರಾಮಾಂತರ ಬ್ಯುರೊ: ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣ ಪೂರ್ಣ ಪ್ರಮಾಣದ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಯೂರಿಯಾ ಹಾಗೂ ಇತರ ರಸಗೊಬ್ಬರಗಳನ್ನು ಕೇಳುವವರು ಇಲ್ಲದಂತಾಗಿದೆ. ರಾಗಿ ಶೇಂಗಾ ಬಿತ್ತನೆಗೆ ಸೆ.15ರವರೆಗೆ ಕಾಲಾವಕಾಶ ಇದ್ದು ರೈತರು ಖರೀದಿಗೆ ಮುಗಿಬೀಳುತ್ತಿಲ್ಲ.ಮಳೆ ಕೊರತೆಯಿಂದಾಗಿ ಈ ವರ್ಷ ರಸಗೊಬ್ಬರಕ್ಕೆ ಬೇಡಿಕೆ ಕುಸಿದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರಕ್ಕೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಪರ್ಯಾಯ ಗೊಬ್ಬರ ಬಳಕೆ ಮಾಡುವಂತೆ ರೈತರಿಗೆ ಸಲಹೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ತಿಳಿಸಿದ್ದಾರೆ. ಡಿಎಪಿಗೆ ಬದಲಾಗಿ ನ್ಯಾನೊ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಯಾಗಿಲ್ಲ’ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಎಂ.ಆರ್. ಸುಮಾ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಮುಸುಕಿನಜೋಳ ಬಿತ್ತನೆಯಾಗಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.